ದೀವಿ ಹಲಸಿನ ಪಾಯಸ

0
411

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ:
ಎರಡು ಕಪ್ ಸಣ್ಣಗೆ ಹೆಚ್ಚಿದ ದೀವಿಹಲಸಿನ ಹೋಳು, ಒಂದು ಕಪ್ ಬೆಲ್ಲದಪುಡಿ, ನಾಲ್ಕು ಚಮಚ ಅಕ್ಕಿ ಹಿಟ್ಟು, ಎರಡು ಕಪ್ ತೆಂಗಿನಹಾಲು, ಏಲಕ್ಕಿ, ಉಪ್ಪು.
 
ತಯಾರಿಸುವ ವಿಧಾನ: 
ದೀವಿಹಲಸಿನ ಹೋಳುಗಳನ್ನು ತೆಳ್ಳಗಿನ ಕಾಯಿಹಾಲಿನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ಬೆಲ್ಲ ಸೇರಿಸಿ. ನಂತರ, ಇದಕ್ಕೆ ಅಕ್ಕಿಹಿಟ್ಟನ್ನು ನೀರು ಮಾಡಿ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಆಮೇಲೆ ಇದಕ್ಕೆ ದಪ್ಪ ತೆಂಗಿನಹಾಲು ಸೇರಿಸಿ ಚೆನ್ನಾಗಿ ಮಗುಚಿ ಒಂದು ಕುದಿ ಕುದಿಸಿ, ಏಲಕ್ಕಿ ಸೇರಿಸಿ ಒಲೆಯಿಂದ ಇಳಿಸಿ.

LEAVE A REPLY

Please enter your comment!
Please enter your name here