'ದೀಪ ಸಮನ್ವಯ' ಲೋಕಾರ್ಪಣೆ

0
228

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಇದೇ ಮೊಟ್ಟಮೊದಲ ಬಾರಿಗೆ ರೂಪಿಸಿದ, ಲಕ್ಷದೀಪೋತ್ಸವದ ಸಮಗ್ರ ವರದಿ ಮತ್ತು ವೈವಿಧ್ಯಮಯ ಚಿತ್ರಣಗಳನ್ನೊಳಗೊಂಡ ವಿಶೇಷ ಸಂಚಿಕೆ ‘ದೀಪ ಸಮನ್ವಯ’ವನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆ ಮಾಡಿದರು.
 
ಸಂಚಿಕೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದ ಹೆಗ್ಗಡೆಯವರು, ಮುಖಪುಟ ಚಿತ್ರದಲ್ಲಿನ ದೀಪದ ವಿನ್ಯಾಸವನ್ನು ನೋಡುತ್ತಾ, 20 ವರ್ಷಗಳ ಹಿಂದೆ ಉತ್ಸವದ ಸಂದರ್ಭದಲ್ಲಿ ಮರದ ವಿನ್ಯಾಸದ ದೀಪಗಳಲ್ಲಿ ಬೆಳಗುತ್ತಿದ್ದ ಧರ್ಮಸ್ಥಳದ ಸುಂದರ ಪರಿಕಲ್ಪನೆಯನ್ನು ತೆರೆದಿಟ್ಟರು.
ಈ ಸಂಚಿಕೆಯಲ್ಲಿ ಆರು ದಿನಗಳ ಕಾಲ ನಡೆದ ಲಕ್ಷದೀಪೋತ್ಸವದ ವಿವಿಧ ಮಜಲುಗಳಾದ ವಸ್ತು ಪ್ರದರ್ಶನ, ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಸಂವೇದನಾತ್ಮಕ ವರದಿಗಳಿವೆ. ನೃತ್ಯ ಕಾರ್ಯಕ್ರಮ, ಲಲಿತಕಲಾ ಗೋಷ್ಠಿ ಸೇರಿದಂತೆ ಶ್ರೀ ಮಂಜುನಾಥ ಸ್ವಾಮಿಯ ದಿನಂಪ್ರತಿ ವಿಶೇಷ ಉತ್ಸವಗಳ ಕುರಿತ ಸಚಿತ್ರ ಬರಹಗಳಿವೆ.
 
ಎಸ್.ಡಿ.ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ, ಡಾ. ಎನ್.ಕೆ ಪದ್ಮನಾಭ, ವಿದ್ಯಾರ್ಥಿಗಳಾದ ಪವಿತ್ರ ಬಿದ್ಕಲಕಟ್ಟೆ, ಕೃಷ್ಣಪ್ರಶಾಂತ್.ವಿ, ಚೈತನ್ಯ ಕುಡಿನಲ್ಲಿ, ಭರತ್ ರಾಜ್.ಕೆ ಹಾಗೂ ಪೌಲೋಸ್ ಉಪಸ್ಥಿತರಿದ್ದರು.
ವರದಿ: ಕೃಷ್ಣಪ್ರಶಾಂತ್.ವಿ
ಚಿತ್ರ: ಪೌಲೋಸ್.ಬಿ

LEAVE A REPLY

Please enter your comment!
Please enter your name here