ದಾಳಿಕೋರರ ಬಂಧನ

0
241

ರಾಷ್ಟ್ರೀಯ ಪ್ರತಿನಿಧಿ ವರದಿ
ಐಸಿಸ್ ಉಗ್ರದಾಳಿಯ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ, ಎನ್ಐಎ ಅಧಿಕಾರಿಗಳು ಕೇರಳ, ತಮಿಳುನಾಡಿನಲ್ಲಿ 6 ಜನರನ್ನು ಬಂಧಿಸಿದ್ದಾರೆ.
 
 
ಬಂಧಿತ ಆರೋಪಿಗಳನ್ನು ಒಮರ್ ಅಲಿಯಾಸ್ ಮುನ್ಸೀದ್ (30) ಅಬು ಬಶೀರ್(29) ಮಹಮ್ಮದ್ ಯೂಸುಫ್(26) ಜಸೀಮ್ ಎನ್ ಕೆ(25) ಸಫ್ವನ್(30) ಹಾಗು ಅಮ್ಮು(24) ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರು ಹಾಗೂ ಕೋಯಿಕ್ಕೋಡ್ ನಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಬಂಧಿತ ಶಂಕಿತ ಭಯೋತ್ಪಾದಕರು ರಹಸ್ಯ ಸಭೆ ನಡೆಸಿ, ದಕ್ಷಿಣ ಭಾರತದ ಪ್ರಮುಖ ವ್ಯಕ್ತಿಗಳು, ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಭಯೋತ್ಪಾದಕರಿಂದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here