ದಾನಿಗಳಿಗೆ ಸನ್ಮಾನ

0
207

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡುವೇಣುಪುರದಲ್ಲಿ ವಿರಾಜಮಾನರಾದ ಶ್ರೀಗೋಪಾಲಕೃಷ್ಣ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಏರ್ಪಡಿಸಿದ ಧಾಮರ್ಿಕ ಸಭೆಯಲ್ಲಿ ದಾನಿಗಳಿಗೆ ಹಾಗೂ ಸಂಘಟಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶ್ರೀವೆಂಕಟ್ರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಮೂಡಬಿದಿರೆ ಇದರ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ವಹಿಸಿದ್ದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಹತ್ವದ ಸಹಕಾರ ನೀಡಿದ ಮುಂಬೈನ ಮನಿಷಾ ಶೆಟ್ಟಿ, ಪೂನದ ಶಶಿಕಲಾ ಶೆಟ್ಟಿ, ಕಳೆದ ಐದು ವರುಷಗಳಿಂದ ಜೀರ್ಣೋದ್ಧಾರ ಕಾರ್ಯದ ನೇತೃತ್ವ ವಹಿಸಿದ ಶಿವಾನಂದ ಪ್ರಭು ದಂಪತಿಗಳು, ಹಾಗೂ ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರದಲ್ಲಿ ಕೈಜೋಡಿಸಿದ ಶಿವರಾಯ ಪೈ, ಪ್ರಶಾಂತ್ ಪೈ, ಪ್ರಕಾಶ್, ಗಣೇಶ್ ಪೈ, ಚಂದ್ರಯ್ಯ ಆಚಾರ್, ನಾರಾಯಣ, ಜಿನೇಶ್ ಜೈನ್, ಲಾಲಾ, ಮಾಧವರನ್ನು ಅತಿಥಿಗಳು ಗೌರವಿಸಿದರು. ಉದ್ಯಮಿಗಳಾದ ಶ್ರೀಪತಿ ಭಟ್, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಉದ್ಯಮಿ ಜಯರಾಮ ಶೆಟ್ಟಿ , ಬಿ.ದುರ್ಗಾ ಪ್ರಸಾದ್ ಬಾಳಿಗಾ , ಸುದರ್ಶನ ಎಂ, ಅಶೋಕ್ ಮಲ್ಯ, ಉಪಸ್ಥಿತರಿದ್ದರು.
#mood#gopalakrishna#sanmana1

LEAVE A REPLY

Please enter your comment!
Please enter your name here