ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನು-ರಘ

0
335

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಯಲಹಂಕದಲ್ಲಿ ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
 
 
ಉಭಯ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ನಿರ್ದೇಶಕ ಎಸ್ ನಾರಾಯಣ್, ಜೇಕಬ್ ವರ್ಗೀಸ್, ಪವನ್ ಒಡೆಯರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ವಿವಾಹ ನಡೆದಿದೆ.
 
 
 
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಮ್ಮಿಬ್ಬರಿಗೂ ಪರಿಚಯವಿತ್ತು. ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮಿಬ್ಬರ ತಾಯಂದಿರ ಆಸೆಯಂತೆ ಮದುವೆ ಮಾಡಿಕೊಂಡಿದ್ದೇವೆ. ಹಲವು ವರ್ಷಗಳ ಸ್ನೇಹ ಈಗ ವಿವಾಹ ಬಂಧನವಾಗಿದೆ ಎಂದು ನೂತನ ದಂಪತಿಗಳಿಬ್ಬರ ತಿಳಿಸಿದ್ದಾರೆ.
 
 
 
ನಿಗೂಢವಾಗಿದ್ದ ಇವರಿಬ್ಬರ ಪ್ರೇಮ ಕೊನೆಗೂ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಅನುಪ್ರಭಾಕರ್ ತಾನು ಪ್ರೀತಿಸಿದ ಯುವಕನೊಂದಿಗೆ ಸಪ್ತಪದಿ ತುಳಿದಿದ್ದಾರೆ. ಈ ಬಗ್ಗೆ ಅನು ನಿನ್ನೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ವಿವಾಹಕ್ಕೆ ಕುಟುಂಬ ಸದಸ್ಯರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

LEAVE A REPLY

Please enter your comment!
Please enter your name here