ದಸರಾ ಉದ್ಘಾಟನೆಗೆ ಕ್ಷಣಗಣನೆ

0
297

ಮೈಸೂರು ಪ್ರತಿನಿಧಿ ವರದಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಎದ್ದು ಕಾಣುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ-2016 ಉದ್ಘಾಟನೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಡೆ ಹಬ್ಬದ ವಾತಾವರಣ ಮನೆ ಮಾಡಿದೆ.
 
 
ಇಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 11.40ಕ್ಕೆ ಧನುರ್ ಲಗ್ನದಲ್ಲಿ  ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ದಸರಾವನ್ನು ಉದ್ಘಾಟಿಸಲಿದ್ದಾರೆ.
 
 
ಮೈಸೂರು ರಾಜಮನೆತನದಿಂದ 11 ದಿನದ ದಸರಾ ಆಚರಣೆ ನಡೆಯಲಿದೆ. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ಇಂದು ಖಾಸಗಿ ದರ್ಬಾರ್ ನಡೆಯಲಿದೆ. ರತ್ನಖಚಿತ ಸಿಂಹಾಸನವೇರಿ ಯುವೀರ ದರ್ಬಾರ್ ನಡೆಸಲಿದ್ದಾರೆ. 25 ವರ್ಷಗಳ ಬಳಿಕ ಈ ಬಾರಿ 11 ದಿನದ ದಸರಾ ಆಚರಣೆ ನಡೆಯುತ್ತಿದೆ. ರತ್ನ ಖಚಿತ ಸಿಂಹಾಸನಕ್ಕೆ ರತ್ನ ಖಚಿತ ಸಿಂಹ ಜೋಡಣೆಯಾಗಿದೆ. ಇಂದು ಬೆಳಗ್ಗೆ 5.50ರಿಂದ 6.10ರ ಶುಭಲಗ್ನನದಲ್ಲಿ ಜೋಡಣೆಯಾಗದೆ.  ಬೆಳಗ್ಗೆ 7ರಿಂದ 7.20ರ ವೇಳೆಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರಗೆ ನವರಾತ್ರಿಯ ಕಂಕಣಧಾರಣೆಯಾಗಿದೆ. ಬೆಳಗ್ಗೆ 11.30ಕ್ಕೆ ಪಟ್ಟದ ಆನೆ, ಕುದುರೆ, ಹಸುವಿಗೆ ಪೂಜೆ ಸಲ್ಲಿಲಾಗುತ್ತದೆ. 11.45ರಿಂದ 12.30ರ ಶುಭಲಗ್ನದಲ್ಲಿ ಸಿಂಹಾಸನಕ್ಕೆ ಪೂಜೆ ನಡೆಯಲಿದೆ. ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ಗೆ ಚಾಲನೆ ನೀಡಲಾಗಿದೆ. ಮಧ್ಯಾಹ್ನ 12.30ರಿಂದ 1.30ರೊಳಗೆ ಚಾಮುಂಡಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಪತ್ನಿ ತ್ರಿಷಿಕಾ ಕುಮಾರಿ ಸಮೇತ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
 
 
ರಂಗು ರಂಗಿನ ಚಿತ್ತಾರ
ಮಹಿಳಾ ದಸರವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಉದ್ಘಾಟಿಸಿದ್ದಾರೆ. ಅರಮನೆಯ ಕೋಟೆ ಆಂಜನೇಯ ದೇಗುಲ ಬಳಿ ಮಾನಸ ಅವರು ತಾವೇ ಸ್ವತಃ ರಂಗೋಲಿ ಬಿಡಿಸುವ ಮೂಲಕ ಕಾವೇರಿ ಸಂದೇಶ ನೀಡಿದ್ದಾರೆ. ‘ಕಾವೇರಿ ಜೀವ ಜಲ, ನಮಗಾಗಿ ನಮ್ಮ ನಾಡಿಗಾಗಿ’ ಎಂಬ ಬರಹದ ಮೂಲಕ ರಂಗೋಲಿ ಹಾಕಿದ್ದಾರೆ. ಅರಮನೆ ಆವರಣದಲ್ಲಿ ರಂಗು ರಂಗಿನ ಚಿತ್ತಾರ ಬಿಡಿಸಲಾಗಿದೆ. ಬಣ್ಣದ ರಂಗೋಲಿ ಬಿಡಿಸುವ ಸ್ಪರ್ಧೆಗೆ ಮಂಜುಳಾ ಮಾನಸ ಚಾಲನೆ ನೀಡಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ 64 ಮಹಿಳಾ ಸ್ಪರ್ಧಿಗಳು ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here