ದರೆಗುಡ್ಡೆ: ಜನ ಸಂಪರ್ಕ ಸಭೆ

0
524

ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ರವರು ಪ್ರತೀ ಗ್ರಾಮ ಪಂಚಾಯತ್‌ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ  ಶಾಸಕರು  ಇಂದು ದರೆಗುಡ್ಡೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಜನ ಸಂಪರ್ಕ ಸಭೆಯಲ್ಲಿ ಭಾಗಿಯಾಗಿದ್ದಾರೆ.

ನೂರಕ್ಕೂ ಹೆಚ್ಚು ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಿದ್ದು ಶಾಸಕರ ಬಳಿ ಹೇಳಿಕೊಂಡರು.ಇದರಲ್ಲಿ ಬಹುತೇಕ ಮಂದಿಯ ಸಮಸ್ಯೆ ಡೀಮ್ಡ್ ಫಾರೆಸ್ಟ್ ಆಗಿದ್ದು ಈ ಬಗ್ಗೆ ಶಾಸಕರು ಸಮರ್ಪಕ ಉತ್ತರ ನೀಡಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು. ಮಾತ್ರವಲ್ಲದೆ ಡೀಮ್ಡ್ ಫಾರೆಸ್ಟ್ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು. ಇನ್ನುಳಿದಂತೆ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು.

ಪಣಪಿಲ, ಕೆಲ್ಲಪುತ್ತಿಗೆ, ದರೆಗುಡ್ಡೆ ಗ್ರಾಮಗಳನ್ನೊಳಗೊಂಡ ದರೆಗುಡ್ಡೆ ಗ್ರಾಮ ಪಂಚಾಯತಿಯಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಜಿಲ್ಲಾ ಪಂಚಾಯತ್ ಸದಸ್ಯೆ ಸುಜಾತ ಕೆ ಪಿ, ತಾಲೂಕು  ಪಂಚಾಯತಿ  ಸದಸ್ಯೆ ರೇಖಾ ಸಾಲ್ಯಾನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಯಮುನಾ, ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ ಹಾಗೂ ಇತರೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here