ದಕ್ಷಿಣ ಕನ್ನಡ ಜಿಲ್ಲಾ ಬಂದ್: ಮಿಶ್ರಪ್ರತಿಕ್ರಿಯೆ

0
237

ನಮ್ಮ ಪ್ರತಿನಿಧಿ ವರದಿ
ಬಸ್ ಸೇವೆ ಸಂಪೂರ್ಣ ಸ್ಥಗಿತ- ಅಂಗಡಿ ಮುಂಗಟ್ಟುಗಳು ಬಂದ್- ವಿರಳ ವಾಹನ ಸಂಚಾರ
ನೇತ್ರಾವತಿ ನದಿ ತಿರುವು ವಿರೋಧಿಸಿ ಹೋರಾಟಗಾರರು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ಗೆ ಹತ್ತಾರು ಸಂಘಟನೆಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದವು. ವಿವಿಧ ಜನಪ್ರತಿನಿಧಿಗಳು , ಮಠಾಧಿಪತಿಗಳು, ಸಾಮಾಜಿಕ ಮುಖಂಡರು ಬಂದ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂಡಬಿದಿರೆ-ಕಾರ್ಕಳದಲ್ಲಿ ಬಂಗ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಲವಂತದಿಂದ ಬಂದ್ ನಡೆಸುವ ದೃಶ್ಯಗಳೂ ಕಂಡುಬಂದಿವೆ. ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತಾದರೂ, ಟ್ಯಾಕ್ಸಿ, ರಿಕ್ಷಾ ಸೇವೆ ಮಾಮೂಲಿಯಾಗಿದ್ದವು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಜನರು ಸ್ವಯಂಪ್ರೇರಿತ ಬಂದ್ ಆಚರಿಸಿದ್ದೂ ಕಂಡುಬಂದವು.ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಬಂದ್ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here