ದಂಡ ಪಾವತಿಸಿದ ಎಒಎಲ್

0
303

ರಾಷ್ಟ್ರೀಯ ಪ್ರತಿನಿಧಿ ವರದಿ
ಕೊನೆಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ (ಎಒಎಲ್) 4.75 ಕೋಟಿ ರೂ. ದಂಡ ಪಾವತಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಿಧಿಸಿದ್ದ ದಂಡವನ್ನು ಆರ್ಟ್ ಆಫ್ ಲಿವಿಂಗ್ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಿದೆ.
 
 
ರಾಜಧಾನಿಯ ಯಮುನಾ ನದಿ ತಟದಲ್ಲಿ ಮೂರು ದಿನಗಳ ಕಾಲ ನಡೆಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದ ಯಾವುದೇ ಪರಿಸರ ಹಾನಿಯಾಗಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ವಾದ ಮಂಡಿಸಿತ್ತು. ಆದರೆ ವಾದವನ್ನು ತಿರಸ್ಕರಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಕಾನೂನು ಉಲ್ಲಂಘಿಸಿದ ಎಒಎಲ್ ಗೆ ರು. 4.75 ಕೋಟಿ ಹಣವನ್ನು ಪಾವತಿಸುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ದಂಡದ ಹಣವನ್ನು ಪಾವತಿಸಿದೆ

LEAVE A REPLY

Please enter your comment!
Please enter your name here