ದಂಡುಪಾಳ್ಯ-2ಕ್ಕೆ ಗಂಡಾಂತರ

0
175

 
ಬೆಂಗಳೂರು ಸಿನಿ ಪ್ರತಿನಿಧಿ ವರದಿ
‘ದಂಡುಪಾಳ್ಯ-2’ ಚಿತ್ರ ನಿರ್ಮಾಣಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ನೋಟಿಸ್ ಜಾರಿಯಾಗಿದೆ.
 
 
ಬೆಂಗಳೂರಿನ ಸಿಟಿಸಿವಿಲ್ ಕೋರ್ಟ್ ನಿಂದ ನೋಟಿಸ್ ಜಾರಿಯಾಗಿದೆ. 6 ಕೈದಿಗಳು ಚಿತ್ರ ಬಿಡುಗಡೆಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇದೊಂದು ನೈಜ ಘಟನೆ ಆಧಾರಿತ ಚಿತ್ರವೆಂದು ಹೇಳಲಾಗಿದೆ. ಆದರೆ ತಮ್ಮ ಬದುಕಿನ ಘಟನೆಗಳ ಬಗ್ಗೆ ಯಾವುದೇ ಹೇಳಿಕೆ ಪಡೆದಿಲ್ಲ, ತಮ್ಮ ಅನುಮತಿಯನ್ನೂ ಪಡೆದಿಲ್ಲ ಎಂದು ಕೈದಿಗಳು ಆರೋಪಿಸಿದ್ದಾರೆ.
 
 
 
ತಮ್ಮ ಅನುಮತಿ ಇಲ್ಲದೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಆರೋಪಿಗಳ ಕುರಿತ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸಿಟಿಸಿವಿಲ್ ಕೋರ್ಟ್ ಚಿತ್ರತಂಡಕ್ಕೆ ತುರ್ತು ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯಲ್ಲಿ ಕೋರ್ಟ್ ಏ.30ಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here