ತ್ರಿವಳಿ ತಲಾಖೆ ಪದ್ಧತಿ ಅಸಂವಿಧಾನಕ

0
343

ರಾಷ್ಟ್ರೀಯ ಪ್ರತಿನಿಧಿ ವರದಿ
ತ್ರಿವಳಿ ತಲಾಖೆ ಪದ್ಧತಿ ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ತ್ರಿವಳಿ ತಲಾಖ್ ಮಹಿಳೆಯರ ಹಕ್ಕನ್ನು ಉಲ್ಲಂಘಿಸುತ್ತದೆ.
ತ್ರಿವಳಿ ತಲಾಖ್ ನಿಂದ ಮಹಿಳಾ ಹಕ್ಕುಗಳಿಗೆ ಧಕ್ಕೆ ಹಿನ್ನೆಲೆ ಸಂವಿಧಾನಕ್ಕಿಂತ ವೈಯಕ್ತಿಯ ಕಾನೂನು ಶ್ರೇಷ್ಠವಲ್ಲ. ಯಾವುದೇ ಕಾನೂನು ಮಂಡಳಿ ಸಂವಿಧಾನಕ್ಕಿಂತ ಮಿಗಿಲಲ್ಲ. ತ್ರಿವಳಿ ತಲಾಖೆ ಪದ್ಧತಿ ಸಂವಿಧಾನ ಬಾಹಿರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
 
 
ಕೇಂದ್ರ ಸರ್ಕಾರ ಸಲಹೆ:
ಇತ್ತೀಚೆಗೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್, ಬಹುಪತ್ನಿತ್ವ ನಿಷೇಧಕ್ಕೆ ಸಲಹೆ ನೀಡಿತ್ತು. ಲಿಂಗ ಸಮಾನತೆ ಹಾಗೂ ಮಹಿಳೆಯರ ಗೌರವದ ವಿಚಾರದಲ್ಲಿ ರಾಜಿ ಎಂಬುದಿಲ್ಲ. ಮಹಿಳೆಯರು ತಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಹಕ್ಕುಗಳು ಅತ್ಯಗತ್ಯ. ತ್ರಿವಳಿ ತಲಾಖ್, ಬಹುಪತ್ಬಿತ್ವವನನ್ಉ ಮುಸ್ಲೀ ರಾಷ್ಟ್ರಗಳೇ ನಿಷೇಧಿಸಿವೆ. ಪದ್ಧತಿ, ಧರ್ಮದ ಹೆಸರಲ್ಲಿ ಮಹಿಳೆಯರ ನಾಗರಿಕತ್ವ ಕಿತ್ತುಕೊಳ್ಳಬಾರದು.
 
 
 
ಏನಿದು ತಲಾಖ್?
ಮುಸ್ಲಿಮರಲ್ಲಿ ಹಲಾಲಾ ಎಂದರೆ ಬಹುಪತ್ನಿತ್ವಕ್ಕೂ ಅವಕಾಶವಿದೆ. 3 ಬಾರಿ ತಲಾಖ್ ತಲಾಖ್ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವುದು. ಈ ರೀತಿಯ ಹೇಳಿಕೆ ನೀಡಿದರೆ ವಿವಾಹ ಬಂಧನ ಮುರಿದುಕೊಂಡಂತೆ. ಮುಸ್ಲಿಂ ಧರ್ಮೀಯರಲ್ಲಿ ಈ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಎಲ್ಲರಿಗೂ ಅನ್ವಯವಾಗುವ ವಿಚ್ಛೇದನ ಕಾನೂನು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ.
 
 
 
ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಕಾನೂನು ಮಂಡಳಿ:
ತ್ರಿವಳಿ ತಲಾಖೆ ನಿಷೇದಕ್ಕೆ ಮುಸ್ಲಿಂ ಕಾನೂನು ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಮರಲ್ಲಿ ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವ ನಿಷೇಧ ಬೇಡ. ಮುಸ್ಲಿಮರ ಧಾರ್ಮಿಕ ಕಾನೂನಿನಲ್ಲಿ ಮೂಗು ತೂರಿಸಬೇಡಿ ಎಂದು ಸರ್ಕಾರದ ವಿರುದ್ಧ ಮುಸ್ಲಿಂ ಕಾನೂನು ಮಂಡಳಿ ಹೌಹಾರಿದೆ.
ಬಹುಪತ್ನಿತ್ವ ತ್ರಿವಳಿ ತಲಾಖ್ ಮುಸ್ಲಿಮರ ಧಾರ್ಮಿಕ ಹಕ್ಕಾಗಿದೆ. ಕೇಂದ್ರ ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಈ ಕೆಲಸಕ್ಕೆ ಕೈ ಹಾಕಿದೆ. ಇತ್ತೀಚೆಗೆ ತ್ರಿವಳಿ ತಲಾಖ್ ಗೆ ಸುಪ್ರೀಂ ನಿಷೇದ ಹೇರಲಾಗಿತ್ತು. ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಸೂಕ್ತವಲ್ಲ. ಜನಾಭಿಪ್ರಾಯ ಸಂಗ್ರಹಕ್ಕೂ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಮೋದಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದಿದೆ.

LEAVE A REPLY

Please enter your comment!
Please enter your name here