ತೋಗರಿಬೇಳೆ ಸೂಪ್

0
162

 
ಬೇಕಾಗುವ ಪದಾರ್ಥಗಳು :
ಒಂದು ಕಪ್ ತೊಗರಿ ಬೇಳೆ , ಅರ್ಧ ಕಪ್ ಕತ್ತರಿಸಿದ ಹೀರೆಕಾಯಿ,  ಅರ್ಧ ಕಪ್ ಕತ್ತರಿಸಿದ ಸೌತೆಕಾಯಿ,  ಅರ್ಧ ಚಮಚ ನಿಂಬೆಹಣ್ಣಿನ ರಸ,  ಒಂದು ಚಮಚ ಜೀರಿಗೆ,  ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ.
 
 
 
ತಯಾರಿಸುವ ವಿಧಾನ :
ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಸ್ವಲ್ಪೇಸ್ವಲ್ಪ ಒಗ್ಗರಣೆ ತಯಾರಿಸಿಕೊಂಡು ಹೀರೆಕಾಯಿ ಮತ್ತು ಸೌತೆಕಾಯಿ ಒಂದು ನಿಮಿಷ ತಾಳಿಸಿ ಅದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಸುರಿಯಿರಿ. ಅದಕ್ಕೆ ಉಪ್ಪು, ನಿಂಬೆ ರಸ, ಉಪ್ಪು ಹಾಕಿ ಹದಿನೈದಿಪ್ಪತ್ತು ನಿಮಿಷ ಚೆನ್ನಾಗಿ ಕುದಿಸಿರಿ. ಅದಕ್ಕೆ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಕೈಯಾಡಿಸಿ. ಅಷ್ಟೇ ತೊಗರಿಬೇಳೆ ಸೂಪ್ ತಯಾರ್.

LEAVE A REPLY

Please enter your comment!
Please enter your name here