ತೈಲ ಬೆಲೆ ದುಬಾರಿ

0
222

 
ರಾಷ್ಟ್ರೀಯ ಪ್ರತಿನಿಧಿ ವರದಿ
ಇಂಧನ ಬೆಲೆ ಏರಿಕೆಯಾಗಿದೆ. ಇದರಿಂದ ಈಗಾಗಲೇ ತರಕಾರಿ-ಬೆಳೆ-ಕಾಳುಗಳ ದುಬಾರಿ ಬೆಲೆಯಲ್ಲಿ ಸುಸ್ತಾದ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದಂತಾಗಿದೆ.
 
 
ತೈಲಗಳಾದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿ ಜೂನ್ 15ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ತೈಲಗಳ ಮೇಲೆ ಸುಂಕ ಜಾಸ್ತಿಯಾದ ಕಾರಣ ಬೆಲೆ ದುಬಾರಿಯಾಗಿದೆ.
 
 
 
ಪ್ರತಿ ಒಂದು ಲೀಟರ್ ಪೆಟ್ರೋಲ್ ಬೆಲೆ 0.5 ಪೈಸೆ ಏರಿಕೆಯಾಗಿದೆ. ಇನ್ನು ಪ್ರತಿ ಒಂದು ಲೀಟರ್ ಡಿಸೇಲ್ ಬೆಲೆಯಲ್ಲಿ 1.26 ಪೈಸೆ ಏರಿಕೆಯಾಗಿದೆ. ಕಳೆದ ಮೇ 1ರಿಂದ ನಾಲ್ಕು ಬಾರಿ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ.
 
 
 
 
ಇಂಧನ ಬೆಲೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತ್ರ ಹೆಚ್ಚಾಗಿದೆ. ಇಂಧನ-ತರಕಾರಿ-ಬೇಳೆಕಾಳುಗಳ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿದರೂ ಸರ್ಕಾರ ಮಾತ್ರ ಇದರ ಬಗ್ಗೆ ಯೋಚನೆ ಮಾಡುತ್ತಿಲ್ಲ.

LEAVE A REPLY

Please enter your comment!
Please enter your name here