ಪ್ರಮುಖ ಸುದ್ದಿವಾರ್ತೆವಿದೇಶ

ತೈಲ ಬೆಲೆಯ್ಲಲಿ ಇಳಿಕೆ

ರಾಷ್ಟ್ರೀಯ ಪ್ರತಿನಿಧಿ ವರದಿ
ವಾಹನ ಸವಾರರಿಗೆ ಸಂತಸದ ಸುದ್ದಿಯೊಂದಿದೆ. ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ ಲೀಟರ್ ಗೆ 1.42 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರೂಪಾಯಿ ಇಳಿಕೆ ಮಾಡಿದೆ.
 
 
ತೈಲ ಕಂಪನಿಗಳು ಭಾನುವಾರ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಿದ್ದು,ಭಾನುವಾರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಜುಲೈ ತಿಂಗಳಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾದಂತಾಗಿದೆ.
 
 
ಈ ಮುನ್ನ ಜುಲೈ 1 ರಂದು ಪೆಟ್ರೋಲ್ 89 ಪೈಸೆ ಮತ್ತು ಡೀಸೆಲ್ 49 ಪೈಸೆ ಕಡಿಮೆಯಾಗಿತ್ತು. ಜುಲೈ 16 ರಂದು ಪೆಟ್ರೋಲ್ 2.25 ರೂ ಮತ್ತು ಡೀಸೆಲ್ 42 ಪೈಸೆ ಕಡಿಮೆಯಾಗಿತ್ತು. ಇದಕ್ಕೂ ಮುನ್ನ ಮೇ 1 ರಿಂದ ಸತತ ನಾಲ್ಕು ಬಾರಿ ಬೆಲೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ ಪೆಟ್ರೋಲ್ 4.52 ರೂ. ಮತ್ತು ಡೀಸೆಲ್ 7.72 ರೂ. ಏರಿಕೆಯಾಗಿತ್ತು.
 
 
ದೆಹಲಿಯಲ್ಲಿ 62.51 ರೂ. ಇದ್ದ ಪೆಟ್ರೋಲ್ ಬೆಲೆ 61.09 ರೂ.ಗೆ ಇಳಿಕೆಯಾಗಲಿದೆ. ಅದೇ ರೀತಿ ಡೀಸೆಲ್ ಬೆಲೆ 54.28 ರೂ. ನಿಂದ 52.27 ರೂ.ಗೆ ಇಳಿಕೆಯಾಗಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here