ತೆಲಿಕೆ ನಲಿಕೆ ತಂಡದ ಲೋಗೊ ಬಿಡುಗಡೆ

0
285

ಉಜಿರೆ ಪ್ರತಿನಿಧಿ ವರದಿ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಆಶ್ರಯದಲ್ಲಿ ತೆಲಿಕೆ-ನಲಿಕೆ ಪ್ರೊಡಕ್ಷನ್ಸ್ ನವರ ಲೋಗೊವನ್ನು ಇತ್ತೀಚೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್. ಮೋಹನ್ ನಾರಾಯಣರವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಂಜುವಾಣಿಯ ಉಪಸಂಪಾದಕ ‘ನಾ’ವುಜಿರೆ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ವೈ ಉಮನಾಥ ಶೆಣೈ, ಡಾ. ಎ. ಪುಂಡರಿಕ ಉಪಸ್ಥಿತರಿದ್ದರು.
 
 
ಕಾಲೇಜಿನ ಸಿಬ್ಬಂದಿ ಹಾಗೂ ತೆಲಿಕೆನಲಿಕೆ ತಂಡದ ಸಂಯೋಜಕರಾದ ಸುರೇಂದ್ರ ಜೈನ್ ನಾರಾವಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಹೊಸ ಹೊಸ ಚಿಂತನೆಗಳನ್ನು ಅಳವಡಿಸಿ ಸಮಾಜಕ್ಕೆ ಬೇಕಾದ ಜಾಗೃತಿಗೊಳಿಸುವ ಕಾರ್ಯಕ್ರಮಗಳಾದ ನಾಟಕ, ಹಾಸ್ಯ ರೂಪಕ, ಸಾಕ್ಷ್ಯಚಿತ್ರದ ಮೂಲಕ ಸಂದೇಶವನ್ನು ನೀಡುತ್ತ ಬಂದಿರುತ್ತದೆ ನಮ್ಮ ತಂಡ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜೊತೆ ಸೇರಿ ಕಾರ್ಯಕ್ರಮಗಳನ್ನು ನೀಡುತ್ತದೆ.
 
 
ಇದಕ್ಕೆಲ್ಲ ಕಾರಣ ಸಂಸ್ಥೆಯ ಕಾರ್ಯದರ್ಶಿಯವರಾದ ಡಾ.ಬಿ.ಯಶೋವರ್ಮ ಮತ್ತು ಕಾಲೇಜಿನ ಪ್ರಾಂಶುಪಾಲರ ಪ್ರೋತ್ಸಾಹ, ಎಸ್.ಡಿ.ಎಂ. ಮಲ್ಟಿಮೀಡಿಯ ಸ್ಟುಡಿಯೋ ಇವರ ಸಹಕಾರದಿಂದ ಈ ಎಲ್ಲ ಯೋಜನೆಗಳು ಸಫಲವಾಗಿವೆ. ತೆಲಿಕೆ ನಲಿಕೆ ತಂಡ ನಿರ್ಮಾಣದ ಎಲ್ಲ ವಿಡಿಯೋಗಳನ್ನು ಯು ಟ್ಯೂಬ್ನಲ್ಲಿ ಸುರೇಂದ್ರ ಜೈನ್ ನಾರಾವಿ ಮತ್ತು ಧನರಾಜ್ ನಿಡಿಗಲ್ ಎಂಬ ಎರಡು ಚಾನೆಲ್ ಮೂಲಕ ಸಮಾಜಕ್ಕೆ ಕಲ್ಪಿಸಿಕೊಟ್ಟಿದೆ.
 
 
ಇನ್ನು ಬೇರೆಬೇರೆ ರೀತಿಯ ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಗೊಂಡಿದೆ ನಿರ್ಮಾಣ ಹಂತದಲ್ಲಿ ಕೃಷ್ಣಕಾಂತ್ ನಾರಾವಿ, ಹರಿಶ್ಚಂದ್ರ ಪೂಜಾರಿ ನಾರಾವಿ, ರಮೇಶ್ ಸೂರ್ಯ, ಜನಾರ್ಧನ ಸೂರ್ಯ ಇನ್ನಿತರ ಗಣ್ಯರು ಸಹಕರಿಸಿದ್ದಾರೆ ಎಂದು ತಿಳಿಸಿದರು.
ಬಿಡುಗಡೆ ಸಮಾರಂಭದಲ್ಲಿ ತಂಡದ ಸದಸ್ಯರಾದ, ಧನ್ ರಾಜ್ ನಿಡಿಗಲ್, ತುಕಾರಾಮ ಸಾಲಿಯಾನ್, ದೇವಿಪ್ರಸಾದ್ ಮುಂಡಾಜೆ, ಸಂದೀಪ್ ಕುಮಾರ್, ರವಿ ಬಿ. ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here