'ತೆರೆದ ಮನೆ' ಮಾಹಿತಿ ಕಾರ್ಯಕ್ರಮ

0
811

ಮಂಗಳೂರು ಪ್ರತಿನಿಧಿ ವರದಿ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್ ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮ ದ.ಕ.ಜಿ.ಪ.ಕಿ.ಪ್ರಾ.ಶಾಲೆ ಬಾಬುಗುಡ್ಡೆ ಅತ್ತಾವರ ಮಂಗಳೂರು ಇಲ್ಲಿ ಆ19ರಂದು ಜರುಗಿತು. ಈ ಕಾರ್ಯಕ್ರಮವನ್ನು ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್ ಲೈನ್ ನ-1098 ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
 
 
ಚೈಲ್ಡ್ ಲೈನ್ ಮಂಗಳೂರು-1098 ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ.ಸಂಪತ್ ಕಟ್ಟಿ ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಚೈಲ್ಡ್ ಲೈನ್-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್ ಲೈನ್-1098 ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಚೈಲ್ಡ್ ಲೈನ್-1098 ಕಾರ್ಯಚಟುವಟಿಕೆಯನ್ನು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು.
 
 
ಕುದ್ಮಲ್ ರಂಗರಾವ್ ಟ್ರಸ್ಟ್(ರಿ) ಮತ್ತು ಬಬ್ಬುಸ್ವಾಮಿ ಕ್ಷೇತ್ರ, ಅತ್ತಾವರ ಇದರ ಉಪಾಧ್ಯಕ್ಷರಾದ ಶ್ರೀ.ಶ್ಯಾಮ ಕರ್ಕೆರ ಸಭೆಯನ್ನು ಉದ್ಧೇಶಿಸಿ ಮಾತುಗಳನ್ನಾಡುತ್ತಾ ಇವತ್ತು ಮಕ್ಕಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಹೆತ್ತವರೇ ಪ್ರಮುಖ ಕಾರಣ, ಅವರು ತಮ್ಮ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡದಿರುವುದು, ಮತ್ತು ಗಂಡ-ಹೆಂಡತಿಯರು ತಮ್ಮ ಮಕ್ಕಳ ಸಮ್ಮುಖದಲ್ಲಿ ಗಲಾಟೆ, ಅವರ ನಡುವಿನ ವೈಮನಸ್ಸಿನಿಂದಾಗಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದ್ದೆ, ಹಾಗಾಗಿ ತಂದೆ-ತಾಯಂದಿರು ತಮ್ಮ ಮಕ್ಕಳ ಮುಂದೆ ಸಮಧಾನದಿಂದ ಇರುವಂತೆ, ಮಕ್ಕಳ ಮುಂದೆ ಸಮಚಿತ್ತದಿಂದ ಇರುವಂತೆ ಸಭಿಕರಿಗೆ ಕಿವಿಮಾತುಗಳನ್ನು ನಿಡಿದರು. ಕುದ್ಮಲ್ ರಂಗರಾವ್ ಟ್ರಸ್ಟ್(ರಿ) ಮತ್ತು ಬಬ್ಬುಸ್ವಾಮಿ ಕ್ಷೇತ್ರ,ಅತ್ತಾವರ ಪ್ರಧಾನ ಕಾರ್ಯದರ್ಶಿ ರಘುವೀರ್ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತ ಎಲ್ಲಾ ಇಲಾಖೆಯನ್ನು ಒಂದೇ ಸೂರಿನಡಿ ಸೇರಿಸಿ ತೆರೆದ ಮನೆ ಕಾರ್ಯಕ್ರಮ ಮಾಡುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದು ಪ್ರಶಂಸಿದರು.
 
 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರಾದ ಜ್ಞಾನೇಶ್ವರಿ ಮಹಿಳೆಯರಿಗೆ ಮತ್ತು ಮಕ್ಕಳಿಗಿರುವ ಸೌಲಭ್ಯಗಳ ಬಗ್ಗೆ, ಮಕ್ಕಳ ಪಾಲನೆ ಪೋಷಣೆ ಬಗ್ಗೆ ಮಾಹಿತಿಯನ್ನು ಹಾಗೂ ಶಿಕ್ಷಣ ಇಲಾಖೆಯಿಂದ ಮಕ್ಕಳಿಗಿರುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
 
 
ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ತಾಯಂದಿರುಗಳು ಎಚ್ಚರವಹಿಸಬೇಕು, ಮಕ್ಕಳಿಗೆ ಅಹಿತಕರ ಸ್ಪರ್ಶಗಳ ಬಗ್ಗೆ ತಿಳುವಳಿಕೆಯನ್ನು ನೀಡುವಂತೆ ತಿಳಿಸಿದರು, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಸಮಸ್ಯೆಗಳು ಬಂದಾಗ ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ, ಮಕ್ಕಳಿಗೆ ತೊಂದರೆಯಾದಗ ಪೊಲೀಸ್ ಇಲಾಖೆ ಶೀಘ್ರವಾಗಿ ಸ್ಪಂದಿಸಿ, ವಿಶೇಷ ಕಾಳಜಿ ವಹಿಸುತ್ತದೆ ಎಂದು ಪಾಂಡೇಶ್ವರ ಪೊಲೀಸ್ ಠಾಣೆಯ ಇಲಾಖಾಧಿಕಾರಿಯಾದ ಮಂಜುಳಾರವರು ತಿಳಿಸಿದರು.
ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಕ್ಕಳ ಹಕ್ಕುಗಳು, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತ್ತು ಸ್ವೀಕಾರ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂದ್ಯಾ ಮಾಹಿತಿಯನ್ನು ನೀಡಿದರು.
 
 
ಮಕ್ಕಳಿಗೆ ಎದೆ ಹಾಲು ಪೂರಕ ಆಹಾರ.ಎದೆ ಹಾಲು ಕುಡಿದ ಮಕ್ಕಳು ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.ಎದೆ ಹಾಲು ಪೌಷ್ಠಿಕ ಅಂಶವಾಗಿ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿರುತ್ತದೆ. ಮಕ್ಕಳಿಗೆ ಎದೆ ಹಾಲು ನಿಡುವುದರಿಂದ ತಾಯಂದಿರು ಕೂಡ ಹಲವು ರೋಗಗಳಿಂದ ದೂರ ಇರಬಹುದು ಮತ್ತು ಇದರಿಂದ ತಾಯಂದಿರು ಕೂಡ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ತುಂಬಾ ಉತ್ತಮ ಎಂದು ಸ್ತನ್ಯಪಾನದ ಮಹತ್ವವನ್ನು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ.ಲಲಿತಾರವರು ಮಾಹಿತಿಯನ್ನು ನೀಡಿದರು.
 
 
ಗುಂಪು ಚರ್ಚೆಯನ್ನು ರೇವತಿ ಹೊಸಬೆಟ್ಟು, ನಡೆಸಿಕೊಟ್ಟರು. ಕ್ರೋಢಿಕೃತ ಅಂಶಗಳನ್ನು ಮಕ್ಕಳ ಸಹಾಯವಾಣಿಯ ಸಭೆಯ ಮುಂದೆ ಮಂಡಿಸಿದರು,
ಕಾರ್ಯಕ್ರಮದಲ್ಲಿ ಯಸ್.ಡಿ.ಯಂ.ಸಿ ಅಧ್ಯಕ್ಷರಾದ ಶ್ರೀ.ಧರ್ನಪ್ಪ ಮತ್ತು ಸದಸ್ಯರು, ಚೈಲ್ಡ್ ಲೈನ್ ಮಂಗಳೂರು-1098 ಇದರ ನಗರ ಸಂಯೋಜಕರಾದ ಯೋಗಿಶ್ ಮಲ್ಲಿಗೆಮಾಡು, ಮೈತ್ರಿ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಧ್ಯಕ್ಷರಾದ ಅಂಗನವಾಡಿ ಸಹಾಯಕಿ ಶೀಲಾ, ದ.ಕ.ಜಿ.ಪ.ಕಿ.ಪ್ರಾ. ಶಾಲೆಯ ಶಿಕ್ಷಕಿ, ಚೈಲ್ಡ್ ಲೈನ್-1098 ತಂಡ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಾಬುಗುಡ್ಡೆ ಅಂಗನವಾಡಿ ಶಿಕ್ಷಕಿ ಸುಜಾತ ಶೆಟ್ಟಿಯವರು ವಂದಿಸಿದರು. ದ.ಕ.ಜಿ.ಪ.ಕಿಪ್ರಾ.ಶಾಲೆ ಬಾಬುಗುಡ್ಡೆಯ ಮುಖ್ಯ ಶಿಕ್ಷಕಿಯಾದ ಜೆಸಿಂತಾ ಸ್ವಾಗತಿಸಿ, ಚೈಲ್ಡ್ ಲೈನ್ ಮಂಗಳೂರು-1098 ತಂಡ ಸದಸ್ಯೆ ಜಯಂತಿ ಕೋಕಳ ಕಾರ್ಯಕ್ರಮವನ್ನು ನಿರೂಪಿಸಿದರು.
 

LEAVE A REPLY

Please enter your comment!
Please enter your name here