' ತೆರೆದ ಮನೆ ' ಮಾಹಿತಿ ಕಾರ್ಯಕ್ರಮ

0
471

ನಮ್ಮ ಪ್ರತಿನಿಧಿ ವರದಿ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್ ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಯುವಕ ಮಂಡಲ (ರಿ) ಕೃಷ್ಣಾಪುರ 5 ನೇ ಬ್ಲಾಕ್ ಕಾಟಿಪಳ್ಳ, ಸುರತ್ಕಲ್ ನಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್ ಲೈನ್ ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
 
mnglr_childline1
 
ಮಕ್ಕಳ ಸಹಾಯವಾಣಿ, ಚೈಲ್ಡ್ ಲೈನ್ನೋಡಲ್ ಸಂಯೋಜನಾಧಿಕಾರಿಯಾದ ಯೋಗೀಶ್ ಮಲ್ಲಿಗೆಮಾಡುರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್ ಲೈನ್ ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು.
 
 
ಕಾರ್ಯಕ್ರಮದಲ್ಲಿ ಸಭೆಯನ್ನುದ್ಧೇಶಿಸಿ ಸ್ಥಳೀಯ ಕಾರ್ಪೋರೇಟರ್ ತಿಲಕರಾಜ್ರವರು ಮಾತನಾಡಿ, ಚೈಲ್ಡ್ ಲೈನ್-1098ನಿಂದ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸ್ಥಳೀಯ ಮಕ್ಕಳ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಟಿಪಳ್ಳ ವಾರ್ಡ್ ನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
 
 
ಮನೆಯ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಆರೋಗ್ಯವಂತ ಕುಟುಂಬ ಜೀವನ ಹಾಗೂ ಮಕ್ಕಳನ್ನು ಸಮಾಜಕ್ಕೆ ನೀಡಬೇಕೆಂದು ಶಿಶು ಅಭಿವೃದ್ಧಿ ಇಲಾಖೆಯ ಕುಸುಮರವರು ಮಹಿಳೆಯರಿಗೆ ಮತ್ತು ಮಕ್ಕಳಿಗಿರುವ ಸೌಲಭ್ಯಗಳ ಬಗ್ಗೆ, ಮಕ್ಕಳ ಪಾಲನೆ ಪೋಷಣೆ ಬಗ್ಗೆ ಮಾಹಿತಿಯನ್ನು, ನೊಂದ ಮಹಿಳೆಯರು ರಕ್ಷಣೆಗಾಗಿ ಇಲಾಖೆಯನ್ನು ಅಥವಾ ಅಂಗನವಾಡಿ ಕೇಂದ್ರವನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು. ಹಾಗೂ ಶಿಕ್ಷಣದ ಬಗ್ಗೆ ಸರಕಾರದಿಂದ ಇರುವ ಸೌಲಭ್ಯಗಳ ಬಗ್ಗೆ ಶಿಕ್ಷಣ ಇಲಾಖಾಧಿಕಾರಿ ಶಾಂತರವರು ತಿಳಿಸಿದರು.
 
 
ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ಹಾಗೂ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ತಾಯಂದಿರುಗಳು ಎಚ್ಚರವಹಿಸಬೇಕು, ಮಕ್ಕಳಿಗೆ, ಮಹಿಳೆಯರಿಗೆ ತೊಂದರೆಯಾದಗ, ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮಾಹಿತಿ ನೀಡಿ, ಪೊಲೀಸ್ ಇಲಾಖೆ ಶೀಘ್ರವಾಗಿ ಸ್ಪಂದಿಸಿ, ವಿಶೇಷ ಕಾಳಜಿ ವಹಿಸುತ್ತದೆ ಎಂದು ಸುರತ್ಕಲ್ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಯಾದ ಶಿವಪ್ರಕಾಶ್ರವರು ತಿಳಿಸಿದರು.
 
 
ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತ್ತು ಸ್ವೀಕಾರ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಧ್ಯಾ ಕುಲಾಲ್ರವರು ಹಾಗೂ ಕಾಣೆಯಾದ ಮಕ್ಕಳ ಪತ್ತೆ ಹಚ್ಚುವ ಬಗ್ಗೆ, ಮತ್ತು ಮಕ್ಕಳ ಸುರಕ್ಷತೆಗಾಗಿ ಪೋಷಕರು ಪಾಲಿಸಬೇಕಾದ ಕ್ರಮದ ಬಗ್ಗೆ ಕಾಣೆಯಾದ ಮಕ್ಕಳ ಬ್ಯೂರೊದ ವಾಣಿ ನಾಯಕ್ರವರು ಮಾಹಿತಿ ನೀಡಿದರು. ಗುಂಪು ಚರ್ಚೆಯನ್ನು ಮಕ್ಕಳ ಸಹಾಯವಾಣಿಯ ಜಯಂತಿ ಕೋಕಳರವರು ನಡೆಸಿಕೊಟ್ಟರು. ಕ್ರೋಢಿಕೃತ ಅಂಶಗಳನ್ನು ಕು|| ಪವಿತ್ರಾ ಜ್ಯೋತಿಗುಡ್ಡೆ ಸಭೆಗೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಆದ್ಯಕ್ಷರಾದ ಜಯಂತಿ.ಟಿ.ರೈ, ಸ್ಥಳಿಯ ಅಂಗನವಾಡಿ ಶಿಕ್ಷಕಿಯರು,ಸಹಾಯಕಿಯರು ಹಾಗೂ ಸ್ಥಳೀಯ ವಿಧ್ಯಾರ್ಥಿಗಳು, ಪೋಷಕರು, ಸ್ವ-ಸಹಾಯ ಸಂಘದ ಸದಸ್ಯರು, ಉಪಸ್ಥಿತರಿದ್ದರು. ಕಾಟಿಪಳ್ಳ ಯುವಕ ಮಂಡಲದ ಸಹಕಾರ ನೀಡಿದ್ದರು, ಆಶಾಲತಾ ಕುಂಪಲರವರು ಕಾರ್ಯಕ್ರಮವನ್ನು ನಿರೂಪಿಸಿದರು, ನಾಗರಾಜ್ ಪಣಕಜೆ ಸ್ವಾಗತಿಸಿ, ಅಸುಂತಾ ಡಿ’ಸೋಜರವರು ವಂದಿಸಿದರು.
 

LEAVE A REPLY

Please enter your comment!
Please enter your name here