ತೆರೆಗೆ ಅಪ್ಪಳಿಸಿದ 'ಚಕ್ರವ್ಯೂಹ'

0
359

 
ಸಿನಿ ಪ್ರತಿನಿಧಿ ವರದಿ
ರಾಜ್ಯಾದ್ಯಂತ ಇಂದು ‘ಚಕ್ರವ್ಯೂಹ’ ರಿಲೀಸ್ ಆಗಿದೆ. ಇಂದಿನಿಂದ ಥಿಯೇಟರ್ ನಲ್ಲಿ ಚಕ್ರವ್ಯೂಹ ಅಬ್ಬರವೇರಲಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಹೋರದೇಶದ 50 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
 
 
ಕೆಲವೆಡೆ ಬೆಳಗ್ಗೆ 4 ಗಂಟೆಯಿಂದಲೇ ಶೋ ಆರಂಭವಾಗಿದೆ. ‘ಚಕ್ರವ್ಯೂಹ’ ಚಿತ್ರವನ್ನು ಸರವಣ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪುನೀತ್ ಗೆ ಡಿಂಪಲ್ ಬೆಡಗಿ ರುಚಿತಾ ರಾಮ್ ಸಾಥ್ ನೀಡಿದ್ದಾರೆ. ಚಕ್ರವ್ಯೂಹಕ್ಕೆ ಎಸ್ ಎಸ್ ತಮನ್ ಮ್ಯೂಸಿಕ್ ಕಾಂಪೋಸ್ ಮಾಡಿದ್ದಾರೆ. ಚಿತ್ರದ ಹಾಡಿಗೆ ಜ್ಯೂ.ಎನ್ ಟಿ ಆರ್-ಕಾಜರ್ ದನಿಯಾಗಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್ ವಾಯ್ಸ್ ನೀಡಿದ್ದಾರೆ.
 
 
 
ಸಂಗೀತ ನಿರ್ದೇಶಕ ಎಸ್ ಎಸ್ ಥಮನ್ ಮತ್ತು ಸಿನೆಮ್ಯಾಟೋಗ್ರಾಫರ್ ಶಣ್ಮುಗ ಸುಂದರಮ್ ಚಿತ್ರದ ಒಂದು ಭಾಗ ಆಗಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲಾ, ಭವ್ಯಾ, ಅಭಿಮನ್ಯು ಸಿಂಗ್ ಮತ್ತು ರಂಗಾಯಣ ರಘು ಕೂಡ ನಟಿಸಿದ್ದಾರೆ
 
 
ಮುಂಜಾನೆಯಿಂದಲೇ ಪವರ್ ಸ್ಟಾರ್ ಚಿತ್ರ ನೋಡಲು ಜನ ಮುಗಿಬಿದ್ದಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 7.30ಕ್ಕೆ ಶೋ ಆರಂಭವಾಗಿದೆ. ಬಾಲಾಜಿ ಥಿಯೇಟರ್ ನಲ್ಲಿ 6 ಗಂಟೆಯಿಂದ ಪ್ರದರ್ಶನ ಆರಂಭವಾಗಿದೆ. ಬಳ್ಳಾರಿಯ ಶಿವ ಥಿಯೇಟರ್ ನಲ್ಲಿ 3 ಗಂಟೆಗೆ ಫಸ್ಟ್ ಶೋ ಶುರುವಾಗಿದೆ.

LEAVE A REPLY

Please enter your comment!
Please enter your name here