'ತೆರಿಗೆ ಕಳ್ಳರಿಗೆ ನಿದ್ರೆಯೇ ಬರುತ್ತಿಲ್ಲ'

0
286

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭ್ರಷ್ಟಾಚಾರದ ವಿರುದ್ಧ ಆಂದೋಲನ ಆರಂಭಿಸಿದ್ದೇವೆ. ಕಪ್ಪು ಹಣ ತಡೆಗೆ ದಿಟ್ಟ ಹಾಗೂ ಕಠಿಣ ಕ್ರಮ ಕೈಗೊಂಡಿದ್ದೇವೆ. ನ.8ರಂದು ಬಡವರ ನೆಮ್ಮದಿಯಿಂದ ನಿದ್ದೆ ಮಾಡಿದ್ದಾರೆ. ಆದರೆ ಶ್ರೀಮಂತರು ನಿದ್ದೇ ಬರದೇ ನಿದ್ದೆ ಮಾತ್ರ ಸೇವಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
 
ಉತ್ತರ ಪ್ರದೇಶದ ಘಾಜಿಪುರ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಧಾನಿ, ಭಾರತ ದೇಶದಲ್ಲಿ ಹಣಕ್ಕೆ ಯಾವ ಕೊರತೆ ಇಲ್ಲ. ಆದ್ರೆ ಹಣ ಎಲ್ಲಿದೆ ಅನ್ನೋದೆ ಸಮಸ್ಯೆ. ನೋಟ್ ಬ್ಯಾನ್ ನಿಂದ ಸಾಕಷ್ಟು ಅಕ್ರಮ ಹಣ ಹೊರಬರಲಿದೆ. ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಲಂಚ ಮುಟ್ಟಲ್ಲ. ಈಗ ಲಂಚದ ಹಣ ಮುಟ್ಟಲು ಅಧಿಕಾರಿಗಳು ಹೆದರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
 
500ರೂ. ಮತ್ತು 1000ರೂ. ನೋಟ್ ಬ್ಯಾನ್ ನಿಂದ ಸಾಮಾನ್ಯರಿಗೆ ಕಷ್ಟವಾಗುತ್ತಿದೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ನೋವು ಕಡಿಮೆ ಆಗುತ್ತದೆ. ನಾವು ಬಡವರ, ರೈತರ ಪರ ಕೆಲಸ ಮಾಡಲು ಬಂದಿದ್ದೇವೆ. ಕಪ್ಪು ಹಣದ ವಿರುದ್ಧ ಕ್ರಮದ ಬಗ್ಗೆ ಭರವಸೆ ಕೊಟ್ಟಿದ್ದೆ, ಈಗ ಇದನ್ನು ಈಡೇರಿಸಲು ಯತ್ನಿಸುತ್ತಿದ್ದೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here