ತೂಕದಲ್ಲಿ 'ಅರ್ಜುನ'ಹೆಚ್ಚು

0
596

ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ದಲ್ಲಿ ಭಾಗವಹಿಸುವ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಈ ಬಾರಿಯೂ ಗಜಪಡೆ ಕ್ಯಾಪ್ಟನ್ ಅರ್ಜುನ ತೂಕವೇ ಹೆಚ್ಚಾಗಿದೆ.
 
 
 
ಗಜಪಡೆ ಕ್ಯಾಪ್ಟನ್ ಅರ್ಜುನ ಆನೆಯ ತೂಕ 5,615 ಕೆ.ಜಿ. ಇದೆ. ಉಳಿದ ಆನೆಗಳಾದ ಅಭಿಮನ್ಯು 4,855 ಕೆ.ಜಿ., ಬಲರಾಮ 4,920ಕೆ.ಜಿ., ಗಜೇಂದ್ರ 4, 620 ಕೆ.ಜಿ., ಕಾವೇರಿ ತೂಕ 3,005 ಕೆ.ಜಿ.ಇದ್ದಾರೆ.
 
 
 
ದೇವರಾಜ ಮೊಹಲ್ಲಾದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ ವೇ ಬ್ರಿಡ್ಜ್ ನಲ್ಲಿ ತೂಕ ಪರಿಶೀಲನೆ ನಡೆಸಲಾಗಿದೆ. ಶುಕ್ರವಾರ ಮಧ್ಯಾಹ್ನ ಗಜಪಡೆಗಳ ಸಮೂಹ ಅರಮನೆ ಆವರಣ ಪ್ರವೇಶಿಸಿತ್ತು.

LEAVE A REPLY

Please enter your comment!
Please enter your name here