ತುಳು ಸಂವಾದ

0
327

ನಮ್ಮ ಪ್ರತಿನಿಧಿ ವರದಿ
ನಾರಾಯಣ ಗುರುಗಳ ಹಿಂದೂ ಸಂಶಯಿಸಿ ಕೇಸು ಹಾಕಿದವರು ಯಾರು?
ಹಿಂದೂ ಧರ್ಮ ಹಾಳು ಮಾಡಿದರು ಎಂದು ನಾರಾಯಣ ಗುರುಗಳ ಮೇಲೆ ಕೇಸು ಹಾಕಿದವರು ಯಾರು? ಎಂಬ ವಿಷಯವಾಗಿ ತುಳು ಸಂವಾದವೊಂದು ಮಾರ್ಚ್ 18ರ ಶನಿವಾರ ಸಂಜೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್ನಲ್ಲಿ ನಡೆಯಿತು.
 
 
ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಸಂವಾದ ಆಯೋಜಿಸಿತ್ತು, ತುಧಸಂಕೇಂ ಸಂಚಾಲಕ ಪೇರೂರು ಜಾರು ಮಾತನಾಡಿ, 1887ರಲ್ಲಿ ನಾರಾಯಣ ಗುರುಗಳು ಶಿವಾಲಯ ಕಟ್ಟಿದ ಬಳಿಕ ವಯ್ದಿಕರು ಅವರನ್ನು ವಿರೋಧಿಸತೊಡಗಿದರು. ತಿರುವನಂತಪುರದ ಮೇಲ್ಜಾತಿ ಜನ ಹಿಂದೂ ಧರ್ಮ ಹಾಳು ಮಾಡುತ್ತಿದ್ದಾರೆ ಎಂದು ನಾರಾಯಣ ಗುರುಗಳ ಮೇಲೆ ಕೇಸು ಹಾಕಿ 18 ವರುಷ ಕೋರ್ಟಿಗೆ ಅಲೆಸಿದವರು ಇದೇ ಹಿಂದೂಗಳು. ಮುಂದೆ ಸರ್ವ ಧರ್ಮಿಯರ ಒತ್ತಡದ ಕಾಗದದ ಮೇಲೆ ಚೆನ್ನೆಯ್ ಹೈಕೋರ್ಟಿನಿಂದ ಕೇಸನ್ನು ಬ್ರಿಟಿಷ್ ಜಡ್ಜ್ ವಜಾ ಮಾಡಿದರು. ಮುಂದೆ ಮೇಲು ಜಾತಿ ಜನ ತುಳಿಯಲ್ಪಟ್ಟವರಿಗೆ ಕೂಲಿ ಕೆಲಸ ಕೊಡದಿರಲು ತೀರ್ಮಾನಿಸಿದರು.
 
 
 
ಆಗ ಗುರುಗಳು ಅವರಿಗಾಗಿ ಗಂಜಿ ಕೇಂದ್ರ ತೆರೆದುದಲ್ಲದೆ ಅವರ ಕಯ್ಕಸುಬಿಗೆ ಅವಕಾಶ ಮಾಡಿಕೊಟ್ಟರು, ಅವರೇ ತಾವು ತಯಾರಿಸಿದ ಹುರಿಹಗ್ಗದಿಂದ ಸಾಬೂನಿನವರೆಗೆ ಎಲ್ಲವನ್ನೂ ಅವರೇ ಮಾರುವ ವ್ಯವಸ್ಥೆಯನ್ನೂ ಮಾಡಿದರು. ನಾರಾಯಣ ಗುರುಗಳು ಒಮ್ಮೆ ಗುರುಗಳೆನಿಸಿಕೊಂಡ ಮೇಲೆ ತನ್ನ ಹಣೆಯ ಮೇಲೆ ಧಾರ್ಮಿಕ ಚಿಹ್ನೆ ಧರಿಸುವುದನ್ನು ತೊರೆದರು. ಆಲುವದಲ್ಲಿ ಸರ್ವ ಧರ್ಮ ಅಧ್ಯಯನ ಕೇಂದ್ರ ತೆರೆದುದಲ್ಲದೆ ಅಲ್ಲಿ ಯಾವುದೇ ಪೂಜೆ, ಮೂರ್ತಿ ಸಲ್ಲದೆಂದರು. ಹಣ ಹಾಳು ಮಾಡುವ ಯಾವುದೇ ಪೂಜೆಯ ಅಗತ್ಯವಿಲ್ಲವೆಂದಿದ್ದರು ಗುರು. ನಾರಾಯಣ ಗುರುಗಳು ಸಾಯುವ ಹೊತ್ತಿನಲ್ಲೂ ಹಿಂದೂ ವ್ಯವಸ್ಥೆಯನ್ನು ವಿರೋಧಿಸಿದವರು ಎಂಬುದು ನೆನಪಿಡಬೇಕಾದ ವಿಷಯ ಎಂದು ಅವರು ಹೇಳಿದರು.
 
 
ಹಿರಿಯ ಇಂಗ್ಲಿಷ್ ಪತ್ರಕರ್ತ ವಿ. ಟಿ. ರಾಜಶೇಕರ್ ಮಾತನಾಡಿ ತಿರುವನಂತಪುರ ಮತ್ತು ಮಂಗಳೂರಿನಲ್ಲಿ ಗುರುಗಳ ಕೆಲಸದ ಮತ್ತು ಬೆಂಬಲಿಗರ ಸಾಮ್ಯತೆಯನ್ನು ವಿವರಿಸಿದರು. ಪ್ರವೀಣ್ ಶೆಟ್ಟಿ, ದಿನೇಶ್ ಮೂಲ್ಕಿ, ಮಹೇಶ್, ನವೀನ್ ಚಂದ್ರ ಮೊದಲಾದಾವರು ತಮ್ಮ ಅಭಿಪ್ರಾಯ ತಿಳಿಸಿದರು.

LEAVE A REPLY

Please enter your comment!
Please enter your name here