ತುಳುನಾಡು ತಿರ್ಗಾಟ ರಥಯಾತ್ರೆ ನಾಳೆಯಿಂದ ಪ್ರಾರಂಭ

0
322

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಡಿಸೆಂಬರ್ 9ರಿಂದ 13 ರ ವರೆಗೆ ಬದಿಯಡ್ಕದಲ್ಲಿ ಜರಗಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ಬಸ್ರೂರು ತುಳುವೇಶ್ವರದಿಂದ ಕಾಸರಗೋಡು ತುಳುವನದವರೆಗೆ ನಡೆಯುವ ತುಳುನಾಡು ತಿರ್ಗಾಟ ರಥಯಾತ್ರೆಗೆ ಆ.28ರಂದು ಬೆಳಿಗ್ಗೆ 10 ಗಂಟೆಗೆ ಬಸ್ರೂರು ತುಳುವೇಶ್ವರದಿಂದ ಚಾಲನೆ ದೊರಕಲಿದೆ.
 
 
ತುಳುನಾಡಿನಾದ್ಯಂತ ಮೂರು ತಿಂಗಳುಗಳ ಕಾಲ ಸಂಚರಿಸಿ ನಾಡಿನೆಲ್ಲರನ್ನು ವಿಶ್ವ ತುಳುವೆರೆ ಆಯನಕ್ಕೆ ಆಮಂತ್ರಿಸುವುದರ ಜೊತೆಗೆ ತುಳುನಾಡಿನ ಜಾನಪದ ಕಲಾ ಪ್ರಕಾರಗಳ ಪ್ರದರ್ಶನದೊಂದಿಗೆ ನಡೆಯುವ ರಥಯಾತ್ರೆಯಲ್ಲಿ ಪ್ರತಿ ಊರಿನಲ್ಲೂ ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ, ಸಮಾಜಸೇವೆ ಮೊದಲಾದ ವಿಶೇಷ ಸೇವೆಗೈದ ಮಹನೀಯರನ್ನು ಅಭಿನಂದಿಸುವ ಕಾರ್ಯವೂ ನಡೆಯಲಿದೆ.
 
 
ನಾಳೆ ಬೆಳಿಗ್ಗೆ 10 ಗಂಟೆಗೆ ಬಸ್ರೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಸ್ರೂರು ಮಹಲಿಂಗೇಶ್ವರ ಕ್ಷೇತ್ರದ ಧರ್ಮದರ್ಶಿ ಸಾಮಾಜಿಕ ಮುಂದಾಳು ಅಪ್ಪಣ್ಣ ಹೆಗ್ಡೆ ರಥಯಾತ್ರೆಗೆ ಚಾಲನೆ ನೀಡಲಿರುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here