ತುಳುನಾಡಿನ ಸಾಂಸ್ಕೃತಿಕ ಪರಂಪರೆ ವಿಚಾರ ಸಂಕಿರಣ

0
375

 
ಮೂಡಬಿದಿರೆ ಪ್ರತಿನಿಧಿ ವರದಿ
ತಮಿಳು ಭಾಷೆಗಿಂತಲೂ ಹಿರಿಯ ಸ್ಥಾನ ತುಳು ಭಾಷೆಗಿದೆ ಎಂಬುದು ಇತ್ತೀಚೆಗೆ ಸಾಬೀತಾಗಿದೆ. ವಿವಿಧ ಕಡೆಗಳಲ್ಲಿ ತುಳುಪಿಲಿ ಕಲಿಯುವ ಕಾರ್ಯಾಗಾರಗಳು ನಡೆಯುತ್ತಿವೆ ಎಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಬಿ ಹೇಳಿದರು.
 
 
mood_dhavala1
 
 
ಇತಿಹಾಸವನ್ನೊಮ್ಮೆ ತಿರುಗಿನೋಡಿದರೆ ತುಳು ಲಿಪಿಯ ಬಳಕೆಯಲ್ಲಿ ಕುಂಠಿತವಾಗಿದೆಯಾದರೂ ಭಾಷಾ ಬೆಳವಣಿಗೆಯಲ್ಲಿ ತೊಂದರೆಗಳಾಗಿಲ್ಲ. ವಿಶ್ವದಾದ್ಯಂತ ಒಂದುಕೋಟಿಗೂ ಮಿಕ್ಕಿ ತುಳುಮಾತನಾಡುವವರಿದ್ದಾರೆ. ಎಂಟನೇ ಪರಿಚ್ಛೇದಕ್ಕೆ ತುಳುಭಾಷೆಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. 6ನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಮಟ್ಟದ ತನಕವೂ ತುಳುಭಾಷೆಯ ಪಠ್ಯಕ್ರಮಕ್ಕೆ ಬೇಕಾದ ಪ್ರಯತ್ನಗಳು ಆಗುತ್ತಿವೆ ಎಂದವರು ವಿವರಿಸಿದರು.
 
 
 
ಮೂಡಬಿದಿರೆಯ ಧವಳಾ ಕಾಲೇಜಿನಲ್ಲಿ ಶನಿವಾರ ನಡೆದ ತುಳುನಾಡಿನ ಸಾಂಸ್ಕೃತಿಕ ಪರಂಪರೆ ಎಂಬ ಒಂದು ದಿನದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಶ್ರೀಧವಲಾ ಕಾಲೇಜಿನ ಹೆರಿಟೇಜ್ ಕ್ಲಬ್ ಕಾರ್ಯಕ್ರಮ ಆಯೋಜಿಸಿತ್ತು.
 
 
 
ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಕೆ.ಹೇಮರಾಜ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ದೈವಾರಾಧನೆಯಲ್ಲಿ ಸಾಧನೆ ಮೆರೆದ ಪರಂಪರೆಯ ಉಳಿವಿಗೆ ಕಾರಣೀಕರ್ತರಾದ ಸುರೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹೆರಿಟೇಜ್ ಕ್ಲಬ್ ಸಂಚಾಲಕ ಸುದೀಪ್ ಸ್ವಾಗತಿಸಿದರು. ಅಭಿನಯ ಕಾರ್ಯಕ್ರಮ ನಿರ್ವಹಿಸಿದರು. ಕ್ಲಬ್ ನ ಕಾರ್ಯದರ್ಶಿ ನವೀನ್ ವಂದಿಸಿದರು.

LEAVE A REPLY

Please enter your comment!
Please enter your name here