ತುಳುಗೆ ಸಂವಿಧಾನದ ಮಾನ್ಯತೆ ನೀಡಲು ಮೋದಿ ಚಿಂತನೆ

0
443

ನಮ್ಮ ಪ್ರತಿನಿಧಿ ವರದಿ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅಖಿಲಭಾರತದ ತುಳು ಒಕ್ಕೂಟ ಮತ್ತು ತುಳುನಾಡ ನಿಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿದೆ.
 
modi_virendra hegde1
 
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಬುಧವಾರ ದಿಲ್ಲಿಯಲ್ಲಿ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಗೆ ಪ್ರಧಾನಿ ಮೋದಿಯವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ವಿರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.
 
 
 
ಶ್ರೀಕ್ಷೇತ್ರಕ್ಕೆ ಆಹ್ವಾನ
ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸದ್ದ ಹೆಗ್ಗಡೆಯವರು ಪ್ರಧಾನಿ ಮೋದಿಯವರಿಗೆ ಶ್ರೀಕ್ಷೇತ್ರದ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಾಮಾಜಿಕ ಚಟುಚಟಿಕೆ ಕುರಿತು ವಿವರಿಸಿದ್ದಾರೆ. ನಂತರ ಕ್ಷೇತ್ರದ ಛಾಯಾಚಿತ್ರಗಳು ಮತ್ತು ಕ್ಷೇತ್ರ ಪರಿಚಯದ ಪುಸ್ತಕಗಳನ್ನು ನೀಡಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here