ತುರ್ತು ಭೂಸ್ಪರ್ಶಿಸಿದ ವಿಮಾನ

0
326

ನಮ್ಮ ಪ್ರತಿನಿಧಿ ವರದಿ
ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಮುಂಬೈನಿಂದ ಕೊಚ್ಚಿನ್‌ಗೆ ಹೊರಟಿದ್ದ ವಿಮಾನದಲ್ಲಿ 58 ಪ್ರಯಾಣಿಕರಿದ್ದರು.
 
 
ಮುಂಬೈನಿಂದ ಹೊರಟ ಬಳಿಕ, ತಾಂತ್ರಿಕ ದೋಷ ಕಂಡು ಬಂದಿದೆ. ಪೈಲಟ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ, ಸುರಕ್ಷಿತವಾಗಿ ಇಳಿಸಿದ್ದಾರೆ. ತಾಂತ್ರಿಕ ದೋಷ ಸರಿಯಾದ ಬಳಿಕ ಕೊಚ್ಚಿನ್ ಗೆ ಪ್ರಯಾಣ ಮುಂದುವರೆಸಲಾಗುವುದು ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here