ತುಟ್ಟಿ ಭತ್ಯೆ ಹೆಚ್ಚಳ

0
381

ರಾಷ್ಟ್ರೀಯ ಪ್ರತಿನಿಧಿ ವರದಿ
ರಾಜ್ಯ ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿಗೆ ಸರ್ಕಾರದಿಂದ ಉಡುಗೊರೆಯೊಂದು ಲಭ್ಯವಾಗಿದೆ. ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ. 4.25ರಷ್ಟು ಹೆಚ್ಚಳ ಮಾಡಿದೆ.
 
 
ರಾಜ್ಯ ಸರ್ಕಾರ ಇಂದು ಸಂಜೆ ಈ ಆದೇಶ ಹೊರಡಿಸಿದ್ದು, ಜುಲೈ 1, 2016ರಿಂದ ಅನ್ವಯ ಆಗುವಂತೆ ಆದೇಶ ಮಾಡಿದ್ದು ಹಾಲಿ ಇರುವ ಶೇ.36 ರಿಂದ 40.25ಕ್ಕೆ ಹೆಚ್ಚಿಳವಾಗುತ್ತದೆ.
 
 
ಸರ್ಕಾರದ ಮತ್ತು ಜಿಲ್ಲಾ ಪಂಚಾಯತಿ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‍ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿವಿಗಳಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here