ತುಟ್ಟಿಬತ್ಯೆಯನ್ನು ಕೂಡಲೇ ನೀಡಿ

0
406

ವರದಿ: ವಿ ಸೀತಾರಾಮ್ ಬೇರಿಂಜ
ಹೈಕೋರ್ಟಿನ ತೀರ್ಪಿನ ಪ್ರಕಾರ ಬೀಡಿ ಕಾರ್ಮಿಕರಿಗೆ ತುಟ್ಟಿಬತ್ಯೆಯನ್ನು ಕೂಡಲೇ ನೀಡಬೇಕು. ಬೀಡಿ ಕಾರ್ಮಿಕರಿಗೆ 2015-16ಕ್ಕೆ ನೀಡಬೇಕಾಗಿದ್ದ ಹೆಚ್ಚುವರಿ ತುಟ್ಟಿಬತ್ಯೆಯನ್ನು ಸ್ಥಳಿತಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಹೈಕೋರ್ಟ್ ರದ್ದು ಪಡಿಸಿತ್ತು. ಇದು ಬೀಡಿ ಕಾರ್ಮಿಕರ ಹೋರಾಟಗಳಿಗೆ ಸಂದ ಜಯವಾಗಿದೆ ಎಂದು ಎಸ್. ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಕಾರ್ಮಿಕರನ್ನು ಅಭಿನಂದಿಸುತ್ತದೆ. ಹೈಕೋರ್ಟಿನ ಈ ತೀರ್ಪಿನಿಂದ ಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ಕೋರ್ಟುಗಳ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.
 
 
ಈ ತೀರ್ಪಿನ ಮೇರೆಗೆ ಕಳೆದ ವರ್ಷ ನೀಡಬೇಕಾಗಿದ್ದ ತುಟ್ಟಿಬತ್ಯೆಯನ್ನು ಕೂಡಲೇ ನೀಡಬೇಕೆಂದು ಫೆಡರೇಶನಿನ ಜಿಲ್ಲಾ ಸಮಿತಿ ಬೀಡಿ ಮಾಲಕರನ್ನು ಒತ್ತಾಯಿಸುತ್ತದೆ ಎಂದು ಎಸ್. ಕೆ. ಬೀಡಿ ವರ್ಕರ್ಸ್ ಫೆಡರೇಶನ್ ನ ಜಿಲ್ಲಾ ಕಾರ್ಯದರ್ಶಿ ವಿ ಎಸ್ ಬೇರಿಂಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here