ತೀವ್ರಗೊಂಡ 'ಕಾವೇರಿ' ಹೋರಾಟ

0
291

ನಮ್ಮ ಪ್ರತಿನಿಧಿ ವರದಿ
ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾವಣೆಯಾಗಿದ್ದಾರೆ. ಮೈಸೂರು ಕಡೆ ತೆರಳುತ್ತಿದ್ದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನಾಕಾರರು ಲಾರಿ ಬಿಟ್ಟಿದ್ದಾರೆ.
ತಮಿಳುನಾಡು ಸಿಎಂ ಜಯಲಲಿತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
ಎಫ್ ಐ ಆರ್ ದಾಖಲೆ
ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಸುಮಾರು 250 ಪ್ರತಿಭಟನಾಕಾರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ರೈತರ ಬೆಳೆಗಳಿಗೆ ನೀರು ಬಿಡುಗಡೆ
ರಾಜ್ಯದ ರೈತರ ಜಮೀನುಗಳಿಗೆ ನೀರು ಬಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆದೇಶದಂತೆ ಇಂದು ಬೆಳಗ್ಗೆಯೇ ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಬಿಡುಗಡೆಯಾಗಿದೆ. ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ಕಾವೇರಿ ನೀರು ಬಿಡುಗಡೆಯಾಗಿದೆ.
ವಿರಿಜಾ ನಾಲೆ ದೇವರಾಯ ನಾಲೆ, ಬಂಗಾರದೊಡ್ಡಿ ನಾಲೆಗೆ ನೀರು ಬೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಲು ಸರ್ಕಾರ ಈ ಮೂಲಕ ಪ್ರಯತ್ನಿಸಿದೆ.
 
 
ಪ್ರತಿಭಟನೆಯಲ್ಲಿ ತಾರಾಮೆರುಗು
ಮಂಡ್ಯದ ಸಂಜಯ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಾರಾ ಮೆರುಗು ಬಂದಿದೆ. ಪ್ರತಿಭಟನೆಯಲ್ಲಿ ನಟ, ನಿರ್ದೇಶಕ ಜೋಗಿ ಪ್ರೇಮ್ ಭಾಗಿಯಾಗಿದ್ದಾರೆ. ಪ್ರೇಮ್ ಜತೆ ಗಾಂಧಿಗಿರಿ ಚಿತ್ರತಂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here