ತೀರ್ಪು ನೀಡಲು ನಕಾರ ಎಂದ ಸುಪ್ರೀಂ

0
263

ರಾಷ್ಟ್ರೀಯ ಪ್ರತಿನಿಧಿ ವರದಿ
ಸಂಕ್ರಾಂತಿ ಸುಗ್ಗಿಯ ಸಂದರ್ಭದಲ್ಲಿ ತಮಿಳುನಾಡಿನ ಪ್ರಮುಖ ಆಚರಣೆಯಾದ ಗೂಳಿ ಓಡಿಸುವ ಆಟ ಜಲ್ಲಿಕಟ್ಟಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿದೆ.
 
ಈ ಕುರಿತು ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಡಬೇಕೆಂಬ ಮನವಿಯನ್ನು ತಿರಸ್ಕರಿಸಿ, ಈ ಕುರಿತು ಕರಡನ್ನು ರಚಿಸಲಾಗಿದೆ. ಆದರೆ ಶನಿವಾರದೊಳಗೆ ತೀರ್ಪು ನೀಡಲು ಸಾಧ್ಯವಿಲ್ಲವೆಂದು ಹೇಳಿದೆ. ಅಲ್ಲದೆ ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ನ್ಯಾಯಪೀಠ ಆದೇಶ ಹೊರಡಿಸುವುದು ಸಮಂಜಸವಲ್ಲ ಎಂದು ಕೂಡ ಹೇಳಿದೆ.
 
 
 
ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಜಲ್ಲಿಕಟ್ಟನ್ನು ನಿಷೇಧಿಸಿರುವುದರಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ತಾತ್ಕಾಲಿಕವಾಗಿ ನಿಂತಿದೆ. ಪ್ರಾಣಿಗಳಿಗೆ ತೀವ್ರ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಂಘಗಳು ಅರ್ಜಿ ಹಾಕಿದ್ದವು.

LEAVE A REPLY

Please enter your comment!
Please enter your name here