ತಿರುಗುಬಾಣವಾಗದೇ ಶ್ರೀ ಬಾಣ?

0
528

 
ಮಸೂರ ಅಂಕಣ: ಆರ್ ಎಂ ಶರ್ಮ
ನಾವು ತಲೆಬರಹದಲ್ಲಿ ಬರೆದಿರುವುದನ್ನೇ ಈಗ ವಿಸ್ತಾರವಾಗಿ ಚಿಂತಿಸಿ-ಮಂಥನಮಾಡಿ ನಮ್ಮ ಸಿದ್ಧಾಂತವನ್ನು ಸನ್ಮಾನ್ಯ ಓದುಗರ ಮುಂದೆ ಇಡುತ್ತೇವೆ.
ತಿರುಗುಬಾಣಕೆ ಪೂರ್ವ೯ಭಾವಿಯಾಗಿ -ಬಾಣ-ಅದರ ಪ್ರಯೋಗ ಇರಲೇಬೇಕು.
ಬಾಣ ಎಂದಮೇಲೆ ಅದರ ಪ್ರಯೋಗಕ್ಕೆ ಏನಾದರೂ ನಿದಿ೯ಷ್ಟ ಲಕ್ಷ್ಯವಿರಲೇಬೇಕು.
ಇದು ಸುಸಂಪನ್ನ-ಶ್ರೀಮಂತ-ವಿವಾದರಹಿತವಾಗಿರಲೇಬೇಕು.
ಆಗಲೇ ಬಾಣಕ್ಕೆ-ಗುರಿ-ಗುರಿಯ ಫಲ ಸಾಧು-ಸಿಂಧು-ಸಾಧ್ಯ.
ಬಾಣ-ಗುರಿಕಾರ-ಆಗ ಕೆಲಸ ಅಚ್ಚುಕಟ್ಟು.
ಏನೇ ಲೆಕ್ಕಾಚಾರತಪ್ಪಿದರೂ-ಗುರಿ ಮುಟ್ಟದೇ ಪ್ರಯೋಜನಕ್ಕೆ ಬರದು.
ಈಗ ನೋಡೋಣ ನಮ್ಮ-ಪ್ರಸ್ತುತಿಯ ಆಂತಯ೯ವನ್ನು.
ಮಹಾಕವಿ ಕಾಳಿದಾಸನ ಮೇರು ಕಾವ್ಯ-“ಕುಮಾರ ಸಂಭವಂ”-ನ ಪ್ರಮುಖಘಟ್ಟವನ್ನು.
ಪಾರ್ವತಿ ಅರಮನೆ ತೊರೆದು ಪರಶಿವನ ಹುಡುಕಾಟದಲ್ಲಿ-ಹಿಮಾಲಯ-ತಪಸ್ಸು-ದೀಕ್ಷಾ ಎಂತ ಶಿವ ಸಾನ್ನಿಧ್ಯದ ಹಿಮಾಲಯದಲ್ಲಿ ವಾಸ್ತ್ವ್ಯ ಹೂಡಿದ್ದು ಸಾಂಪ್ರತವಿದೆ.
ಅನೇಕ ದಿನಗಳ ಪ್ರಯತ್ನ-ಅನೇಕರೀತಿಯ ಪ್ರಯತ್ನ-ಶಿವನ ಜತೆಗೆ ವಾದ-ಚಚೆ೯-ಗಹನವಾಗಿ ಗಮ್ಯವಾಗಿ ಎಳ್ಳ ಶಿವ ಸಂಪತ್ತಿನ ದಾಖಲೆ.
ಇನ್ನು ಶಿವ ಒಲಿಯಬೇಕು-ಮದುವೆ-ಅಲ್ಲಿಗೆ ಉದ್ದೇಶ ಪರಿಪೂಣ೯.
ಇಲ್ಲಿದೆ ಕಷ್ಟ-ಸಂಕೀಣ೯ತೆ-ಸಾಧಿಸಲು ಬೇಕು ಜಾಣ್ಮೆ-ವ್ಯವಧಾನ.
ಆಗಲೇ ಮನ್ಮಥ ಪ್ರವೇಶ-ಮುಂದಿನ ರಸಮಯ-ಸಾಹಸಮಯ ಸಾಧನೆಗೆ ಪ್ರವೇಶ.
ಪರಮೇಶ್ವರ ಯೊಗ-ಸಮಾಧಿಯಲ್ಲಿ ತೊಡಗಿದ್ದಾನೆ.
ಅವನನ್ನನ್ನು ಎಚ್ಚರಿಸಿ ಸಾಮಾನ್ಯ-ಸಹಜ ಸ್ಥಿತಿಗೆ ತರಬೇಕು ನಂತರದ ಸಂಗತಿಗಳಿಗೆ ತೊಡಗಿಸಿಕೊಳ್ಳಬೇಕು.
ಇದೇನು ಸುಲಭವೇ?
ಪರಾತ್ಪರದ ಯೋಗನಿದ್ದೆಯನ್ನು ದೂರಮಾಡಲು ಬೇಡವೇ ಅಸೀಮ ಬುದ್ಧಿವಂತಿಕೆ?
ಮನ್ಮಥ ಸಮಯ ಸಾಧಿಸಿ ಹೂಬಾಣವನ್ನು-ಪಾರ್ವತಿಯ ಎದುರಿನಲ್ಲಿ ಪ್ರಯೋಗಿಸುತ್ತಾನೆ ಪರಶಿವನಮೇಲೆ.
ಇಲ್ಲಿದೆ ಸಾಧ್ಯತೆ-ನಿಗೂಢತೆ-ಫಲಿತಾಂಶ ಎಲ್ಲ ಸಾಂದ್ರವಾಗಿ.
ಇಲ್ಲಿ ಚಿದ್ರ ಅಪಾಯ-ಅಡಿಪಾಯ ಬುಡಮೇಲು-ಅಲ್ಲಿಗೆ ಜಗನ್ನಾಟಕದ ಪರಿಸಮಾಪ್ತಿ.
ಮೌಲಿಕ ಕೆಲಸ-ಲೋಕಕಲ್ಯಾಣದ ಗುರಿ-ಎಷ್ಟು ನಿಗಾ ಮಾಡಿದರೂ ಸಾಲದೆಂಬ ಮಾತಿದ್ದದ್ದೆ.
ಹೂಬಾಣ ಬಿಟ್ಟಾಯಿತು-ಗುರಿ ತನಕ ಹೋಯಿತು ನಾಂತರ?
ಇಘೋ ಇದೇ ಪರಮೋಚ್ಚ ಘಟ್ಟ.
ಶಿವನನನ್ನು ನಾಟಬೇಕಿದ್ದ ಬಾಣ ಅದರಲ್ಲಿ ಮುಗ್ಗರಿಸಿತು.
ಅಲ್ಲಿಗೆ ಬಾಣ ಹಿಂತುರಗಲೇ ಬೇಕು.
ಆದದ್ದೂ ಅದೇ.
ಇದನ್ನೇ ತಿರುಗುಬಾಣ ಎನ್ನುವುದು.
ಅಲ್ಲಿಗೆ ಬಾಣಬಿಟ್ಟ
ಮನ್ಮಥ ಮಣ್ಣುಮುಕ್ಕಬೆಕಿತ್ತು ಲೊಕಾಚಾರದ ಮಾತಿನಲ್ಲಿ.
ಆದರೆ ಶಿವ ತೀಮಾ೯ನ ಅದು ಹಾಗೆ ಆಗಲಿಲ್ಲ.
ಇಲ್ಲಿಯೇ ತಿರುಗುಬಾಣ ಹೊಸ ಅವತಾರದಲ್ಲಿ ಕೆಲಸ ಮಡಿತು/ಮಾಡಿಸಿತು.
ಶಿವನೀಂದ ತಿರಸ್ಕೃತಗೊಂಡ ಬಾಣವು ಮೊನೆಯನ್ನು ಕಲೆದುಕೊಮ್ಡು ಮೊಂಡಾಯಿತು.
ಈ ಮೊಂಡು ಬಾಣವೇ ಲ್ಲಿಯೇ ಇದ್ದ ಪಾರ್ವತಿಯ ಎದೆಗೆ ಬಡಿದು-ಅಲ್ಲಿ ಅಗಲವಾದ ಘಾಯವನ್ನು ಮಾಡಿತು.
ಇದನ್ನು ಕವಿವಾಣಿಯಲ್ಲಿ ಕೇಳೋಣ-
“ಅಸಹ್ಯ ಹುಂಕಾರ ಪುರಾ ಪುರಾರಿಂ ಅಪ್ರಾಪ್ತ ಶಿಲೀಮುಖಂ ವ್ಯಾಯತಪಾತಂ
ಅಕ್ಷಿಣೋತ್ ವಿಶೀಣ೯ಮೂತೇ೯ರಪಿ ಪುಷ್ಪಧನ್ವನಃ”
ಇದರ ಅಥ೯-ಶಿವನಿಂದ ತಿರಸ್ಕೃತಗೊಣ್ದ ಮನ್ಮಥನ ಹೂಬಾಣವು ಮೊನಚನ್ನು ಕಳೆದುಕೊಂಡು ಮೊಂಡಾಗಿ ಎದುರಿನಲ್ಲಿಯೇ ಇದ್ದ ಪಾರ್ವತಿಯ ಎದೆಯಲ್ಲಿ
ಅಗಲವಾದ ಘಾಯವನ್ನು ಮಾಡಿತು.
ಈ ಘಾಯದ ರೂಪವೇ ಪ್ರೇಮಾಂಕುರ.
ಈ ಪ್ರೇಮಾಂಕುರವೇ ಶ್ರ್‍ಇ ಮಂತ-ಬುದ್ಧಿವಂತ-ಜಗಕ್ಕೆ ಹಿತ.
ಈ ಪ್ರೆಮಾಂಕುರವೇ ಲೋಕೋದ್ಧಾರಕ-ಶಣ್ಮುಖ ಜನನ.
ಈ ಪರದೈವವೇ-ತಾರಕನ-ಮಾರಣಹೋಮಕ್ಕೆ ಸಾಧನ.
ತಾರಕ ಲೋಕಕಂಟಕ-ಶಣ್ಮುಖಬಲಿ-ಜಗಕ್ಕೆ ನಲಿವು-ನೋವು ನಿವಾರಕ.
ಅಡೆ ತಿರುಗುಬಾಣವಾಗದೇ ಶ್ರೀಬಾಣವಾದ ಅಮ್ಘ-ಅದ್ಭುತ ಚಮತ್ಕಾರ-ಶ್ರೀಕರ.
ಮಣ್ಣುಮುಕ್ಕಬೇಕಿದ್ದ ಮನ್ಮಥ ನಿಧಾ೯ರ ಚಿನ್ನವಾಯಿತು-ಚನ್ನಾಯಿತು-ಗೆಲುವಾಯಿತು.
ತಿರುಗುಬಾಣವಾಗದೇ ಬಾಣಬಿಟ್ಟ ಮನ್ಮಥ ಕೃತಾಥ೯ನಾದ-
ಜಗತ್ತಿಗೆ-ದೇವಸೇನಾಪತಿಯನ್ನು ಕೊಟ್ಟು ಹಿತಮಾಡಿದ-ಮಾಡಿಸಿದ.
ಕುಂಆರಸಂಭವಂ ಎಂದರೆ ಕುಮಾರನ ದಿವ್ಯ ಉಪಸ್ಥಿತಿ.
ಇದರ ಅಥ ಕುಮಾರನ ಜಗತ್ ಪ್ರವೇಶ.
ಅಂತಕನಾಗಿ ಕಂಟಕ ಪರಿಹರಿಸಿ-ತಾರಕನ್ನೌ ಯಮಪುರಿಗೆ ಅಟ್ಟಿ ಎಳ್ಳ ಜಗತ್ತಿಗೆ ಶಾಂತಿ-ನೆಮ್ಮದಿ-ನಿರಾಳ ಒದಗಿಸಿದ ಮಹಾನ್ ಚೇತನ-ಶ್ರೀ ಸುಬ್ರಹ್ಮಣ್ಯ!
ಲೌಕಿವಾಗಿ ತಿರುಗುಬಾಣ ತೀರ ಸರಳ-ಸಹಜ.
ಅಪರುಪಕ್ಕೆ ತಿರುಗುಬಾಣ ಶ್ರೀ ಬಾಣವಾಗಬಹುದು.
ಆದರೆ ಇಲ್ಲಿ ಸನ್ನಿವೇಶ ದವಿಕ.
ಫಲ ಮಾಮಿ೯ಕ.
ಅದೇ ತಾರಕನವಧೆ-ಕುಮಾರಜನನದ ಕಥೆ.
ಇದೇ ಹೂಬಾಣ-ಶ್ರೀಬಾಣವಾದ ಮಹಾನ್ ಘಟನೆ.
ಶಿವಪಾರ್ವತಿ ಸಮಾಗಮ-ಅಲ್ಲಿಗೆ ಎಲ್ಲಾ ಆಯಿತು ಸುಗಮ.
ಶ್ರೀ ಸುಬ್ರಹ್ಮಣ್ಯ-ಮಾನ್ಯ-ಅನನ್ಯ-ಲೋಕರಕ್ಷಕ.
ದೆವ ಸೇನಾಪತಿಗೆ ಕೋಕೋಟಿ ನಮಸ್ಕಾರಗಳು.
ಆರ್ .ಎಂ.ಶಮ೯,
ಮಂಗಳೂರು
[email protected]

LEAVE A REPLY

Please enter your comment!
Please enter your name here