ತಿಂಗಳ ಮಹಾ ಸಂಭ್ರಮ ಶಿಕ್ಷಕರಿಗೆ ಸನ್ಮಾನ

0
170


ಅಜೆಕಾರು: ೧೧೧ ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ತಿಂಗಳುಗಳಿಂದ ನಡೆದ ತಿಂಗಳ ಸಂಭ್ರಮದ ಮಹಾ ಸಂಭ್ರಮದಲ್ಲಿ ಶಾಲಾ ಶಿಕ್ಷಕ ವೃಂದವನ್ನು ಗೌರವಿಸಲಾಯಿತು.


ತಿಂಗಳ ಸಂಭ್ರಮ ಸಮಿತಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಇಡೀ ದಿನದ ಕಾರ್ಯಕ್ರಮವನ್ನು ಆಯೋಜಿಸಿದ್ದವು.

Advertisement


ಹಿರಿಯ ಮಾಧ್ಯಮ ಮಿತ್ರ ಸೋಮಪ್ಪ ಪರ್ಕಳ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು ಕನ್ನಡ ಶಾಲೆಗಳ ಸದಾ ಚಟುವಟಿಕೆಯ ಕೇಂದ್ರಗಳಾಗಿ ಬೆಳೆದಾಗಲೆ ಕನ್ನಡ ಭಾಷೆಯ ಸಾಹಿತ್ಯದ ಬೆಳವಣಿಗೆ ಸಾಧ್ಯ ಎಂದರು.


ಕನ್ನಡ ಶಾಲೆಯ ಮಕ್ಕಳ ಸಂಭ್ರಮ ಕಂಡು ಬಾಲ್ಯದ ನೆನಪುಗಳು ಮರುಕಳಿಸಿದವು. ಹೀಗೆ ಸರಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಸಾಹಿತಿ ಡಾ.ಬದರಿನಾಥ ಜಾಗೀರದಾರ್ ಬೆಂಗಳೂರು ಹೇಳಿದರು.


ಇದೊಂದು ವಿಭಿನ್ನ ಕಾರ್ಯಕ್ರಮ, ಶಿಕ್ಷಕರನ್ನು, ಹತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರೆ, ಕನ್ನಡದ ಶಾಲು ನೀಡಿ ಕನ್ನಡ ಪ್ರೀತಿ ಹುಟ್ಟಿಸುವ ಕಾರ್ಯ ಶ್ಲಾಘನೀಯ ಎಂದು ಅತಿಥಿ ಖ್ಯಾತ ವಾಸ್ತು ತಜ್ಞ ಪ್ರಮಲ್ ಕುಮಾರ್ ಹೇಳಿದರು.


ಬೆಳದಿಂಗಳ ಯುವ ರತ್ನ ಗೌರವಕ್ಕೆ ಪಾತ್ರರಾದ ಡಾ.ಬದರಿನಾಥ ಜಾಗೀರದಾರ್, ಪ್ರಮಲ್ಕುಮಾರ್ ಕಾರ್ಕಳ ಮತ್ತು ತನುಶ್ರೀ ಮಂಗಳೂರು-( ಕರ್ನಾಟಕ ಪ್ರತಿಭಾರತ್ನ) ಅವರನ್ನು ಅತಿಥಿಗಳು ಗೌರವಿಸಿದರು.
ತಿಂಗಳ ಸಂಭ್ರಮ ಕಾರ್ಯಕ್ರಮದ ನಿರ್ದೇಶಕ ಡಾ.ಶೇಖರ ಅಜೆಕಾರು ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯ ಎಸ್.ಆರ್ ವಿಶ್ವನಾಥ, ಶಿಕ್ಷಕ ವೃಂದ ಪಾಂಡುರಂಗ ಆಚಾರ್, ಶಾರದಾ, ರವಿಕಲಾ,ಭವಾನಿ, ಶಿಲ್ಪಾ ಗೌರವ ಶಿಕ್ಷಕಿಯರಾದ ಜ್ಯೋತಿ, ಚೈತ್ರ ಕುಮಾರಿ, ಚರಿತ್ರಾ ಅಡುಗೆ ಸಹಾಯಕರಾದ ಬೇಬಿ, ಸುಮತಿ ಶೆಟ್ಟಿ, ದಿಲ್ಶಾದ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಅವರ ಸೇವೆಯನ್ನು ಕೊಂಡಾಡಲಾಯಿತು.


ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್’ ಶೃಜನ್ಯ ಜೆ.ಕೆ ಹೋಮಲ್ಕೆ ಅವರು ಆಕರ್ಷಕ ಯಕ್ಷ ನೃತ್ಯ ಪ್ರದರ್ಶಿಸಿದರು. ೧೧ ಅಂಗನವಾಡಿ ಕೇಂದ್ರಗಳ ನೂರ ಅರವತ್ತು ಮಂದಿ ಮಕ್ಕಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ ಆಚಾರ್ಯ, ಪಂಚಾಯತ್ ಸದಸ್ಯರಾದ ಯಶೋದಾ ಶೆಟ್ಟಿ, ಜಾನ್ ಟೆಲಿಸ್, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಕಾರ್ಯದರ್ಶಿ ಸೌಮ್ಯಶ್ರೀ, ಸದಸ್ಯೆ ಶಶಿಕಲಾ.ಜೆ.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಬಾಲ ಕಲಾವಿದರಾದ ತನುಶ್ರೀ ಮಂಗಳೂರು, ಮಂಗಳೂರು ಮತ್ತು ಮಲ್ಪೆ ಅವರು ಸಂಗೀತ ಕಾರ್ಯಕ್ರಮ ನಡೆಸಿ ತಿಂಗಳ ಸಂಭ್ರಮದ ಗೌರವ ಸ್ವೀಕರಿಸಿದರು.
ಮಹಾ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಮುದ್ದು ಅಕ್ಷರ ಸ್ಪರ್ಧೆಯಲ್ಲಿ ರಕ್ಷಿತಾ, ಯಶಸ್ ತಂತ್ರಿ, ವೀಕ್ಷಾ, ಮೊಹಮ್ಮದ್ ಶಿಫಾನ್, ನೈತಿಕ್, ಫಾತಿಮಾ ಸಫಾ, ಪ್ರಾಪ್ತಿ, ಸುನಿಧಿ.ಎಸ್.ಅಜೆಕಾರು ಬಹುಮಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here