ತಿಂಗಳೊಳಗೆ ಸಂಪುಟ ಪುನಾರಚನೆ: ಸಿಎಂ

0
235

 
ಮೈಸೂರು ಪ್ರತಿನಿಧಿ ವರದಿ
ಈ ತಿಂಗಳ ಒಳಗೆ ಸಚಿವ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಚಿವ ಸಂಪುಟ ಪುನಾರಚನೆಯಲ್ಲಿ ಕೆಲ ಸಚಿವರನ್ನು ಬಿಡುತ್ತೇವೆ, ಕೆಲವರನ್ನು ಇಟ್ಟುಕೊಳ್ಳುತ್ತೇವೆ. ಸಂಪುಟ ಪುನಾರಚನೆಗೆ ಮಾನದಂಡ ಅಂತಾ ಏನೂ ಇಲ್ಲ. ಸಂಪುಟ ಪುನಾರಚನೆಯಲ್ಲಿ ಹೊಸಬರಿಗೆ ಅವಕಾಶ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
 
 
ಅವಧಿ ವಿಸ್ತರಣ
ನಿಗಮ ಮಂಡಳಿ ಅಧ‍್ಯಕ್ಷರ ಅವಧಿ 3 ತಿಂಗಳು ವಿಸ್ತರಣೆಯಾಗಲಿದೆ. ಹೈಕಮಾಂಡ್ ಸೂಚನೆ ಮೇರೆಗೆ ಮೂರು ತಿಂಗಳು ವಿಸ್ತರಿಸಲಾಗಿದೆ. ಮೂರು ತಿಂಗಳ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
 
 
 
ಭರವಸೆ ಈಡೇರಿಸಿದ್ದೇವೆ
ಮೂರು ವರ್ಷಗಳ ಅಡಳಿತ ಸಂಪೂರ್ಣ ತೃಪ್ತಿ ತಂದಿದೆ. ಜತೆಗೆ ನೀಡಿದ್ದ ಬಹುತೇಕ ಭರವಸೆ ಈಡೇರಿಸಿದ್ದೇವೆ. ಜನರಿಗೆ ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ ಎಂದು ಸಿಎಂ ಸರ್ಕಾರದ ಬಗ್ಗೆ ಮಾತನಾಡಿದ ಸಿಎಂ ಸರ್ಕಾರದ ಮೇಲೆ ಯಾವುದೇ ಗುರುತರ ಆರೋಪ ಇಲ್ಲ. ಕೇವಲ ರಾಜಕೀಯವಾಗಿ ಆರೋಪ ಕೇಳಿ ಬಂದಿದೆ.
ಭರವೆಸೆಗಳ ಜತೆಗೆ ಹೊಸ ಕಾರ್ಯಕ್ರಮಗಳನ್ನು ನೀಡುತ್ತೇವೆ. 16 ಭರವಸೆಗಳಲ್ಲಿ ಈವರೆಗೆ 120 ಭರವಸೆಗಳನ್ನು ಈಡೇರಿವೆ ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
 
 
ರಕ್ಷಣಾ ಸಚಿವರಿಗೆ ಸವಾಲು
ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ರಾಜ್ಯದ ನಾಯಕರು ಇರಬಹುದು ಎಂಬ ಪರಿಕ್ಕರ್ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದಾರೆ. ರಕ್ಷಣಾ ಸಚಿವರ ಹೇಳಿಕೆ ‘ಹಿಟ್ ಆಂಡ್ ರನ್’ ರೀತಿ ಆಗಿದೆ. ಕಾಂಗ್ರೆಸ್ ನಾಯಕರಿಗೆ ಮುಜುಗರ ತರಲು ಬಿಜೆಪಿ ಆರೋಪ ಮಾಡುತ್ತಿದೆ. ಪ್ರಕರಣದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರುಗಳ ಹೆಸರನ್ನು ಬಹಿರಂಗ ಪಡಿಸುವಂತೆ ಸಿಎಂ ಸವಾಲೆಸಿದಿದ್ದಾರೆ.

LEAVE A REPLY

Please enter your comment!
Please enter your name here