ತಾಷ್ಕೆಂಟ್ ತಲುಪಿದ ಪ್ರಧಾನಿ

0
208

 
ವರದಿ: ಲೇಖಾ
ಶಾಂಘೈ ಕೋ ಆಪರೇಷನ್ ಆರ್ಗನೈಜೇಷನ್ (ಎಸ್​ಸಿಒ) ಶೃಂಗ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ತಲುಪಿದ್ದಾರೆ.
 
 
 
ಎಸ್​ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಬೆಳಗ್ಗೆ ನವದೆಹಲಿಯಿಂದ ಹೊರಟಿರುವ ಪ್ರಧಾನಿ ಮೋದಿ ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ತಲುಪಿದ್ದಾರೆ. ಉಜ್ಬೆಕ್ ಪ್ರಧಾನಿ ಶವಕತ್ ಮಿರ್ಜಿಯೊಯೆವ್ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದರು. ಎರಡು ದಿನಗಳ ಕಾಲ ನಡೆಯುವ ಸಭೆಯ ಕಾಲದಲ್ಲಿ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರನ್ನು ಮೋದಿ ಭೇಟಿ ಮಾಡಲಿದ್ದಾರೆ.
 
 
 
ಈ ನಡುವೆ ತಾಷ್ಕೆಂಟ್ ತಲುಪಿರುವ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್​ಎಸ್​ಜಿ ಸದಸ್ಯತ್ವ ಪಡೆಯವ ನಿಟ್ಟಿನಲ್ಲಿ ಉಭಯ ನಾಯಕರ ನಡುವೆ ಚರ್ಚೆ ನಡೆಯಲಿರುವುದು ವಿಶೇಷ ಮಹತ್ವ ಪಡೆದಿದೆ.
 
 
 
ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಮತ್ತು ಇದರಿಂದ ಉತ್ತಮ ಫಲಿತಾಂಶ ದೊರಕುವಂತಾಗಲು ಶೃಂಗ ಸಭೆಯಲ್ಲಿ ಭಾರತ ಸಕ್ರಿಯವಾಗಿ ಭಾಗಿಯಾಗಲಿದೆ. ಮಧ್ಯಏಷ್ಯಾದ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಲು ಭಾರತ ಉತ್ಸುಕವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
 
 
 
ಸಿಯೋಲ್​ನಲ್ಲಿ ಆರಂಭಗೊಂಡಿರುವ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ನಿರ್ಣಾಯಕ ಸಭೆಯಲ್ಲಿ ಭಾರತಕ್ಕೆ ಸಮೂಹದ ಸದಸ್ಯತ್ವ ನೀಡುವ ವಿಚಾರದ ಕುರಿತು ಚರ್ಚೆ ನಡೆಯಲಿದೆ. 48 ರಾಷ್ಟ್ರಗಳು ಸದಸ್ಯತ್ವ ಹೊಂದಿರುವ ಪರಮಾಣು ಕ್ಲಬ್ ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನ ಅರ್ಜಿ ಸಲ್ಲಿಸಿವೆ.

LEAVE A REPLY

Please enter your comment!
Please enter your name here