ತಾಯ್ನಾಡಿಗೆ ಬರಲು ಸಹಾಯ ಮಾಡಿದ ವಾಟ್ಸಾಪ್

0
227

ರಾಷ್ಟ್ರೀಯ ಪ್ರತಿನಿಧಿ ವರದಿ
ಕೆಲಸಕ್ಕಾಗಿ ವಿದೇಶಕ್ಕೆ ಹೋದ ಭಾರತದ ಮಹಿಳೆಯೊಬ್ಬರು ಮೋಸ ಹೋದಾಗ ವಾಟ್ಸಾಪ್ ಸಹಾಯಕ್ಕೆ ಬಂದ ಘಟನೆ ನಡೆದಿದೆ. ಏಜೆಂಟ್ ನಂಬಿ ಸೌದಿಗೆ ಹೋದವಳಿಗೆ ವಿದೇಶದಲ್ಲಿ ನರಕ ಕಂಡಿದ್ದಾಳೆ.
 
 
ಮೋಸ ಹೋದ ಮಹಿಳೆ ಕಾರವಾರ ಡಿಸಿ ಬಳಿ ತನ್ನ ಆಳಲು ತೋಡಿಕೊಂಡಿದ್ದಾರೆ. ಆಗ ವಿದೇಶದಲ್ಲಿರೋಳಿಗೆ ಸಹಾಯ ಬಂದಿದ್ದು ಸಾಮಾಜಿಕ ಜಾಲತಾಣ ವಾಟ್ಸಾಪ್. ಹೌದು ಡಿಸಿ ಜತೆ ನೊಂದ ಮಹಿಳೆ ವಾಟ್ಸಾಪ್ ಮೂಲಕ ನಡೆದ ಘಟನೆಯನ್ನು ವಿವರಿಸಿದ್ದಾಳೆ.
 
 
ಕಾರವಾರದ ಶಿವರಾಡ ನಿವಾಸಿ ಪೂರ್ಣಿಮಾ ಏಜೆಂಟ್ ಸಮೀರ್ ಮೂಲಕ ಬ್ಯೂಟಿಷಿಯನ್ ಕೆಲಸಕ್ಕಾಗಿ ಮೇ.25ರಂದು ಸೌದಿಗೆ ತೆರಳಿದ್ದಳು. ಆದರೆ ವಿದೇಶಕ್ಕೆ ತೆರಳಿದ ಮಹಿಳೆಗೆ ಸಮೀರ್ ಶೌಚಾಲಯ ತೊಳೆಯುವ ಕೆಲಸ ಕೊಡಿಸಿದ್ದಾನೆ. 2ವರ್ಷ ಅಗ್ರಿಮೆಂಟ್ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಳು. ಇದರಿಂದ ವಾಪಸ್ ತಾಯ್ನಾಡಿಗೆ ಬರಲಾಗದೆ ಮಹಿಳೆ ಕಂಗಾಲಾಗಿದ್ದಳು.
 
 
ಈ ಪರಿಸ್ಥಿತಿಯನ್ನು ವಾಟ್ಸಾಪ್ ಮೂಲಕ ಜಿಲ್ಲಾಧಿಕಾರಿಗೆ ವಿವರಿಸಿದ ಕಾರಣ ಜಿಲ್ಲಾಡಳಿತ ನೊಂದ ಮಹಿಳೆ ಭಾರತಕ್ಕೆ ಬರಲು ಅಗತ್ಯ ಕ್ರಮಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here