ತವರು ನೆಲೆ ತಲುಪಿದ ವೀರಯೋಧನ ಪಾರ್ಥಿವ ಶರೀರ

0
147

ಬೆಂಗಳೂರು ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದ ನಗ್ರೋಟಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 2ಗಂಟೆಯಿಂದ ಸಂಜೆ 4 ಗಂಟೆಯವರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಬಂಧಿಕರಿಗೆ, ಸಾರ್ವಜನಿಕರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
 
 
ನಗ್ರೋಟಾ ದಾಳಿಯಲ್ಲಿ ಏಳು ಯೋಧರು ಸಾವನ್ನಪ್ಪಿದ್ದರು. ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31), ಮಹಾರಾಷ್ಟ್ರದ ಮೇಜರ್ ಗೋಸವಿ ಕುನಾಲ್ ಮನ್ನಾದಿರ್(33), ರಾಜಸ್ತಾನದ ರಾಘವೇಂದ್ರ ಸಿಂಗ್(28), ಪಂಜಾಬ್ ಹವಾಲ್ದಾರ್ ಸುಖ್ ರಾಜ್ ಸಿಂಗ್(32), ಮಹಾರಾಷ್ಟ್ರ ಮೂಲದ ಲ್ಯಾನ್ಸ್ ನಾಯಕ್ ಕದಮ್ ಸಂಭಾಜಿ(32), ನೇಪಾಳದ ಅಸಿಮ್ ರಾಯ್(32), ತ್ರಿಪುರದ ನಾಯಕ್ ಚಿತ್ತರಂಜನ್(36)ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.

LEAVE A REPLY

Please enter your comment!
Please enter your name here