ತಲೆಕೆಳಗಾದ ಲೆಕ್ಕಾಚಾರ: ಭಾರತಕ್ಕೆ ಗೆಲುವು

0
4961

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಗೆಲುವಿನ ಸನೀಹದಲ್ಲಿದ್ದ ಆಸ್ಟ್ರೇಲಿಯಾ ದಿಢೀರ್ ಕುಸಿತ ಕಂಡು ಟೀಂ ಇಂಡಿಯಾಕ್ಕೆ ತಲೆಬಾಗಿದೆ. ಇದರಿಂದ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದೆ.
ಬೆಂಗಳೂರಿನ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ.
 
75 ರನ್ ಗಳ ಅಂತರಿಂದ ಟೀಂ ಇಂಡಿಯಾ ಜಯಭೇರಿ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 189 ರನ್ ಗಳಿಸಿದ್ದು, ಎರಡನೆ ಇನ್ನಿಂಗ್ಸ್ ನಲ್ಲಿ 274 ರನ್ ಗಳಿಸಿತ್ತು.
ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 276 ರನ್ ಗಳಿಸಿದ್ದು, ಎರಡನೆ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಸಿತ್ತು.
 
2ನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್. ಅಶ್ವಿನ್ 6 ವಿಕೆಟ್ ಪಡೆದಿದ್ದು, ಯಾದವ್ 2 ವಿಕೆಟ್, ಜಡೇಜಾ 1 ವಿಕೆಟ್ ಪಡೆದಿದ್ದಾರೆ. ಆಸೀಸ್ ಪರ ನಾಯಕ ಸ್ಮಿತ್ 28, ಡೇವಿಡ್ ವಾರ್ನರ್ 17, ಮಿಚೆಲ್ ಮಾರ್ಷ್ 13, ಶಾನ್ ಮಾರ್ಷ್ 9, ಹ್ಯಾಂಡ್ಸ್ ಕಂಬ್ 24 ರನ್ ಗಳಿಸಿದ್ದಾರೆ.
4 ಟೆಸ್ಟ್ ಪಂದ್ಯಗಳ ಸರಣಿ   1-1 ಅಂತರದಿಂದ ಸಮವಾಗಿದೆ. ಇದರಿಂದ ಭಾರತ ಪುಣೆ ಸೋಲಿಗೆ ತಿರುಗೇಟು ನೀಡಿದೆ.

LEAVE A REPLY

Please enter your comment!
Please enter your name here