ತರಬೇತಿ ನಿರತ ಚಾಲಕರಿಂದ ಬಸ್ ಸಂಚಾರ ಆರಂಭ

0
280

 
ಬೆಂಗಳೂರು ಪ್ರತಿನಿಧಿ ವರದಿ
4:05- ಚಿಕ್ಕಮಗಳೂರಿನಲ್ಲಿ ಡಿಪೋದ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಬೇಜವಾಬ್ದಾರಿತನ, ಗೈರುಹಾಜರಿ ಮತ್ತು ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಚಿಕ್ಕಮಗಳುರು ಕೆಎಸ್ ಆರ್ ಟಿಸಿ ಡಿಪೋಗೆ ಸೇರಿದ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.
ಪೆದ್ದಣ್ಣ, ಹೊನ್ನಪ್ಪ, ಸುರೇಶ್, ರೇವಣ್ಣಪ್ಪ, ಜಗದೀಶ್ ಎಂಬುವವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಐವರನ್ನು ಸೇವೆಯಿಂದ ವಜಾಗೊಳಿಸುವಂತೆ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಆನಿಲ್ ಆದೇಶಿಸಿದ್ದಾರೆ.
 
4:00- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳ ಸಂಚಾರ ಆರಂಭವಾಗಿದೆ. ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ಶುರುವಾಗಿದೆ. ಹುಬ್ಬಳ್ಳಿ, ಧಾರವಾಡ, ಮೈಸೂರು, ಚಾಮರಾಜನಗರದಿಂದ ಸಾರಿಗೆ ಬಸ್ ಸಂಚಾರ ಶುರುವಾಗಿದೆ.
 
 
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ನಗರದ ಹಲವೆಡೆ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರಿನ ಶಾಂತಿನಗರದಿಂದ ಮೆಜೆಸ್ಟಿಕ್ ಮಧ್ಯೆ 5 ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.
 
 
ತರಬೇತಿ ನಿರತ ಚಾಲಕರ ಮೂಲಕ ಬಿಎಂಟಿಸಿ ಬಸ್ ಚಾಲನೆ ಮಾಡಲಾಗಿದೆ. ಪ್ರಯಾಣಿಕರಿಗಾಗಿ ಬಸ್ ಕಾದು ನಿಮತಿದೆ. ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಶುರುವಾಗಿದೆ. ಪ್ರಯಾಣಿಕರಿಗಿಂತಲೂ ಪೊಲೀಸ್ ಸಿಬ್ಬಂದಿ ಹೆಚ್ಚಿದ್ದಾರೆ.
 
 
ಶಾಂತಿನಗರದಿಂದ ಮೆಜೆಸ್ಟಿಕ್ ಮಾರ್ಗಕ್ಕೆ 1 ಬಸ್, ಶಾಂತಿನಗರದಿಂದ ಜಯನಗರ ಮಾರ್ಗಕ್ಕೆ 1 ಬಸ್, ಶಾಂತಿನಗರದಿಂದ ಶಿವಾಜಿನಗರ ಮಾರ್ಗಕ್ಕೆ 1 ಬಸ್, ಶಾಂತಿನಗರದಿಂದ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕೆ 1 ಬಸ್ ಸಂಚಾರ ಆರಂಭವಾಗಿದೆ.
ಶಿವಾಜಿನಗರದಿಂದ 3 ಬಸ್ ಸಂಚಾರ ಆರಂಭಿಸಿದ್ದು, ಶಿವಾಜಿನಗರದಿಂದ ಬೇರೆ ಬೇರೆ ಕಡೆಗೆ ಬಸ್ ಸಂಚಾರ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್ ಗಳ ಸಂಚಾರ ಆರಂಭವಾಗಿದೆ.
 
 
ಬಿಎಂಟಿಸಿ 8 ಕೆಎಸ್ ಆರ್ ಟಿಸಿ ಬಸ್ ಗಳನ್ನು ರೋಡಿಗಿಳಿಸಿದೆ. ಮೈಸೂರು ರಸ್ತೆ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಸಂಚಾರಿಸಲಿದ್ದು, ನಗರದ ವಿವಿಧೆಡೆ 8 ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ನಡೆಸಲಿದೆ. ಕೆಎಸ್ ಆರ್ ಟಿಸಿಯ ಹಿರಿಯ ಚಾಲಕರಿಂದಲೇ ಬಸ್ ಸಂಚಾರ ನಡೆಯುತ್ತಿದೆ.
 
 
ಸರ್ಕಾರಿ ನೀಡಿದ ಎಚ್ಚರಿಕೆಯ ಸೂಚನೆಗೆ ಹೆದರಿ ಕೆಲವು ಸಾರಿಗೆ ಬಸ್ ಚಾಲಕರು(ಬಿಎಂಟಿಸಿ ಮತ್ತು ಕೆ ಎಸ್ ಆರ್ ಟಿಸಿ) ತಮ್ಮ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.
 
 
ತುರ್ತು ಸಭೆ:
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ತುರ್ತುಸಭೆ ಕರೆದಿದ್ದಾರೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಆಯುಕ್ತ ಡಾ.ರಾಮೇಗೌಡ ಸೇರಿ ಇತರರು ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here