ತರಬೇತಿಗೆ ಅರ್ಜಿ ಆಹ್ವಾನ

0
541

ದ.ಕ. ಪ್ರತಿನಿಧಿ ವರದಿ
ದಿನಾಂಕ 02-05-2016 ರಿಂದ 28-02-2017ರ ವರೆಗೆ ರೈತರ ಮಕ್ಕಳಿಗೆ ಒಟ್ಟು 10 ತಿಂಗಳ ತೋಟಗಾರಿಕೆ ತರಬೇತಿಯನ್ನು ತೋಟಗಾರಿಕೆ ತರಬೇತಿ ಕೇಂದ್ರ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಸಲಾಗುವುದು. ವಿದ್ಯಾರ್ಹತೆ ಹಾಗೂ ಅರ್ಹತೆ: ಎಸ್. ಎಸ್. ಎಲ್. ಸಿ ಉತ್ತೀರ್ಣರಾಗಿರಬೇಕು ಹಾಗೂ ಪೋಷಕರ ಹೆಸರಲ್ಲಿ ಕಡ್ಡಾಯವಾಗಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ವಯೋಮಿತಿ: ಕನಿಷ್ಟ 18 ವರ್ಷ ಮತ್ತು ಗರಿಷ್ಟ 30 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಕನಿಷ್ಟ 18 ವರ್ಷ ಗರಿಷ್ಟ 33 ವರ್ಷ,. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30/- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 15/- ಅನ್ನು ನಿಗದಿಪಡಿಸಿದೆ.
 
 
ಅರ್ಜಿ ಸ್ವೀಕರಿಸಲು ಕೊನೆಯ ದಿನ ಏ. 13 ರಿಂದ 25 ರೊಳಗೆ ಸಂದರ್ಶನ ದಿನ ಏ. 28. ಆಸಕ್ತಿಯುಳ್ಳ ಅಭ್ಯರ್ಥಿಗಳು ತೋಟಗಾರಿಕೆ ತಾಲೂಕು ಕಛೇರಿಯಿಂದ ಅಥವಾ WWW. horticulture.kar.nic.in ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಹಾಗೂ ಅರ್ಜಿ ಶುಲ್ಕದ ಬಾಬ್ತುನ್ನು ಇಂಡಿಯನ್ ಪೋಸ್ಟಲ್ ಆರ್ಡರ್ / ಡಿಮ್ಯಾಂಡ್ ಡ್ರಾಪ್ಟ್ ನ್ನು ಆಯಾಯ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ರವರ ಹೆಸರಿನಲ್ಲಿ ಪಡೆದು, ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಮಂಗಳೂರು ಕಛೇರಿಯಲ್ಲಿ ಸಲ್ಲಿಸಬೇಕು. ತರಬೇತಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1,000/- ಗಳ ಮಾಸಿಕ ಶಿಷ್ಯವೇತನ ನೀಡಲಾಗುವುದು.
 
 
ಹೆಚ್ಚಿನ ಮಾಹಿತಿಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಮಂಗಳೂರು ಅಥವಾ ಹಾರ್ಟಿ ಕಿನ್ಲಿಕ್ ಕಛೇರಿ ದೂರವಾಣಿ ಸಂಖ್ಯೆ: 0824-2412628, 0824-2444298 ಯನ್ನು ಸಂರ್ಪಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here