ತರಬೇತಿಗಳ ಮೂಲಕ ಗ್ರಾಮೀಣ ಜನರ ಉತ್ಪಾದಕತೆ ಸುಧಾರಣೆ ಸಾಧ್ಯವಾಗಿದೆ

0
237

 
ಉಜಿರೆ ಪ್ರತಿನಿಧಿ ವರದಿ
ಸ್ವಸಹಾಯ ಗುಂಪಿನ ಚಟುವಟಿಕೆಗಳು ಗ್ರಾಮೀಣ ಮಹಿಳೆಯರಲ್ಲಿ ಅಭಿವೃದ್ಧಿಯ ಬೆಳಕನ್ನು ಮೂಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕರಿಸಿವೆ. ಕೌಶಲ್ಯವೃದ್ಧಿ ತರಬೇತಿಗಳ ಮೂಲಕ ಗ್ರಾಮೀಣ ಜನರ ಉತ್ಪಾದನೆ, ಉತ್ಪಾದಕತೆ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಣೇಶ್ ಅವರು ಅಭಿಪ್ರಾಯಪಟ್ಟರು.
 
 
ಗಣೇಶ್ ಅವರು ಗುರುವಾಯನಕೆರೆಯಲ್ಲಿ ಶ್ರೀ.ಕ್ಷೇತ್ರ ಗ್ರಾ.ಯೋಜನೆಯಿಂದ ಪ್ರವರ್ತಿತವಾದ ಉಪ್ಪಿನಕಾಯಿ ಹಾಗೂ ಸ್ಕ್ವಾಷ್ ಘಟಕಕ್ಕೆ ಉಜಿರೆಯ ಶ್ರೀ ಧ.ಮಂ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ದಿ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇತ್ತೀಚೆಗೆ ಸಂದರ್ಶನ ನೀಡಿದಾಗ ಮಾತನಾಡುತ್ತಿದ್ದರು.
ಉಪ್ಪಿನಕಾಯಿ ಘಟಕದ ಹಿರಿಯ ಸದಸ್ಯೆ ಕುಸುಮಾ ಅವರು ಮಾತನಾಡುತ್ತಾ ಗುಂಪಿನ ಚಟುವಟಿಕೆಗಳು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿಸಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸಿದೆ. ಶ್ರೀ ಧರ್ಮಸ್ಥಳ ಯೋಜನೆಯ ಮಾರ್ಗದರ್ಶನ ಹಾಗೂ ಸಿರಿ ಸಂಸ್ಥೆಯ ಸಹಕಾರದಿಂದಾಗಿ ಗ್ರಾಮೀಣ ಮಹಿಳೆಯರಾದ ನಾವು ಸ್ವಾವಲಂಬೀ ಜೀವನ ನಡೆಸುವುದು ಸಾಧ್ಯವಾಗಿದೆ ಎಂದು ತಿಳಿಸಿದರು.
 
 
ಬೆಳ್ತಂಗಡಿಯ ಎಸ್.ಕೆ.ಡಿ.ಆರ್.ಡಿ.ಪಿ.ಭರೂಕ ಗ್ರಾಮೀಣಾ ಶ್ರೇಷ್ಠತಾ ಕೇಂದ್ರದ ಆಧ್ಯಾಪಕ ವಸಂತ ಅವರು ಮಾತನಾಡುತ್ತಾ ತರಬೇತಿ ಕಾರ್ಯಕ್ರಮಗಳು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಜಾಗೃತಗೊಳಿಸಿ ಸವಾಲುಗಳನ್ನು ಎದುರಿಸಿ ಬೆಳೆಯಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ದಿ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಜಯ ಕುಮಾರ ಶೆಟ್ಟಿ, ಗಣರಾಜ್, ವಸಂತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here