ತರಕಾರಿ ಮಂಚೂರಿ

0
277

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
ತುರಿದ ಕ್ಯಾಬೆಜ್‌ 2ಕಪ್‌, ತುರಿದ ಕ್ಯಾರೆಟ್‌ 2ಕಪ್‌, ಈರುಳ್ಳಿ 1, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಮೈದಾ 2 ಚಮಚ, ಎಣ್ಣೆ, ಉಪ್ಪು ಸ್ವಲ್ಪ, ಮೆಣಸಿನ ಕಾಳು 1 ಚಮಚ, ಸಕ್ಕರೆ 1 ಚಮಚ, ಗೋಧಿ ಹಿಟ್ಟು -1 ಚಮಚ.
 
 
ಮಾಡುವ ವಿಧಾನ
ತುರಿದಿರುವ ಕ್ಯಾಬೆಜ್‌ ಮತ್ತು ಕ್ಯಾರೆಟ್‌ನ್ನು ಮಿಕ್ಸ್‌ ಮಾಡಿ ಅದರಿಂದ ನೀರನ್ನು ಹಿಂಡಿ ತೆಗೆಯಿರಿ. ಒಂದು ತಟ್ಟೆಯಲ್ಲಿ ಕ್ಯಾಬೆಜ್‌ ಮತ್ತು ಕ್ಯಾರೆಟ್‌ ಮಿಕ್ಸ್‌ ಮಾಡಿ 2 ಚಮಚ ಮೈದಾ ಮತ್ತು ಉಪ್ಪನ್ನು ಸೇರಿಸಿ. ಸಣ್ಣ ಉಂಡೆಗಳನ್ನು ಮಾಡಿ. ಅನಂತರ ಒಂದು ಬಣಾಲೆಯಲ್ಲಿ ಎಣ್ಣೆಯನ್ನು ಕುದಿಸಿ ಕ್ಯಾಬೆಜ್‌ ಮತ್ತು ಕ್ಯಾರೆಟ್‌ನಿಂದ ತಯಾರಿಸಿ ಉಂಡೆಯನ್ನು ಕರಿದು ಬಿಡಿ.ಈ ಮತ್ತೂಂದು ಬಣಾಲೆಯಲ್ಲಿ 2 ಚಮಚ ಎಣ್ಣೆಯನ್ನು ಕುದಿಸಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌, ಹಸಿರು ಮೆಣಸು ಮತ್ತು ಈರುಳ್ಳಿಯನ್ನು ಸೇರಿಸಿ. ನೀರು, ಉಪ್ಪು, ಮೆಣಸಿನ ಕಾಳು, ಸಕ್ಕರೆಯನ್ನು ಸೇರಿಸಿ ಮತ್ತು ಕುದಿಸಿ. ಒಂದು ಚಮಚ ಗೋಧಿ ಹಿಟ್ಟನ್ನು ಅರ್ಧಕಪ್‌ ತಣ್ಣೀರಿನೊಂದಿಗೆ ಸೇರಿಸಿ ಚೆನ್ನಾಗಿ ಕಲಸಿ. ಕರಿದ ಉಂಡೆಯನ್ನು ನಿಧಾನವಾಗಿ ಇದಕ್ಕೆ ಸೇರಿಸಿ. ತರಕಾರಿ ಮಂಚೂರಿಯನ್ನು 4 ನಿಮಿಷ ಬೇಯಿಸಿ ಸವಿಯಲು ನೀಡಿ.

LEAVE A REPLY

Please enter your comment!
Please enter your name here