ತಮ್ಮ ಸ್ವಾರ್ಥಕ್ಕೋಸ್ಕರ ಅಸ್ಪೃಶ್ಯತೆ ಸೃಷ್ಠಿಸಿದ್ದಾರೆ: ಸಿದ್ದು

0
616

ಬೆಂಗಳೂರು ಪ್ರತಿನಿಧಿ ವರದಿ
ಅಸ್ಪೃಶ್ಯತೆ ಎನ್ನುವುದು ಮಾನಸಿಕ ರೋಗ. ಅಸ್ಪೃತೆ ಎನ್ನುವುದನ್ನು ಮನುಷ್ಯ ಮಾಡಿಕೊಂಡಿರುವುದು. ಕೆಲವರು ತಮ್ಮ ಸ್ವಾರ್ಥಕ್ಕೋಸ್ಕರ ಅಸ್ಪೃಶ್ಯತೆ ಸೃಷ್ಠಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
 
 
 
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಮಾತನಾಡಿದ ಸಿಎಂ ಸಿದ್ದು, ಮೊದಲು ಅಸ್ಪೃಶ್ಯತೆಯಿಂದ ಎಲ್ಲರೂ ಹೊರಬರಬೇಕಾಗಿದೆ. ವಿವೇಕಾನಂದರ ವಿಚಾರಧಾರೆ ತಿಳಿದರೆ ಎಲ್ಲವೂ ತೊಲಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
 
 
 
ವಿವೇಕಾನಂದರು ಯುವಕರ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಧರ್ಮವನ್ನು ಟೀಕಿಸಿ, ಜಾತಿ-ಧರ್ಮದಿಂದ ವಿಭಜನೆ ಸಲ್ಲದು. ಎಲ್ಲರೂ ಒಟ್ಟಿದೆ ಬಾಳಬೇಕು, ಸಾಮರಸ್ಯ ಜೀವನ ನಡೆಸಬೇಕು. ವಿವೇಕಾನಂದರು ನವ್ಯ ಭಾರತ ನಿರ್ಮಾಣ ಕನಸು ಕಟ್ಟಿದ್ದರು. ‘ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲಿದಿರಿ’ ಎಂದು ವಿವೇಕಾನಂದ ಸಂದೇಶ ಸಾರಿದ್ದರು. ಆದರೆ ವಿವೇಕಾನಂದರ ವಿಚಾರಧಾರೆಗಳನ್ನು ತಿರುಚಲಾಗುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ವಿಚಾರಧಾರೆಗಳೇ ಬದಲಾಗಿವೆ. ಕೇವಲ ಪೂಜೆ ಮಾಡುವುದಿಲ್ಲ, ಮಾನವೀಯ ಗುಣ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಸಪ್ತಾಹ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here