ತಪ್ಪಿದ್ದ ಭಾರೀ ದುರಂತ

0
304

ರಾಮನಗರ ಪ್ರತಿನಿಧಿ ವರದಿ
ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಜೀಪ್ ಗೆ ರೈಲು ಡಿಕ್ಕಿಯಾದ ಘಟನೆ ರಾಮನಗರ ತಾಲೂಕಿನ ಬಸವನಪುರ ಬಳಿ ಸಂಭವಿಸಿದೆ. ಇಂದು ಬೆಳಗ್ಗೆ 7.20ಕ್ಕೆ ಘಟನೆ ಸಂಭವಿಸಿದೆ.
 
 
ಫೋಟೋಶೂಟ್ ಗೆಂದು ರೈಲ್ವೆ ಹಳಿ ಮೇಲೆ ಜೀಪ್ ನಿಲ್ಲಿಸಿದ್ದರು. ಸಾಫ್ಟ್ ವೆರ್ ಇಂಜಿನಿಯರ್, ಪತ್ನಿ ಪಾರಾ, ಬೆಂಗಳೂರಿನ ಟೆಕ್ಕಿ ಸಂದೀಪ್, ಪತ್ನಿ ಪ್ರತಿಮಾ ಸುರಕ್ಷಿತರಾಗಿದ್ದಾರೆ. ಈ ನಾಲ್ವರು ಹಳಿ ಮೇಲೆ ಜೀಪ್ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದರು.
 
 
ರೈಲು ಬರುವುದನ್ನೂ ಗಮನಿಸದೇ ಫೋಟೋಶೂಟ್ ನಡೆಸಿದ್ದಾರೆ. ರೈಲು ಹತ್ತಿರ ಬಂದ ನಂತರ ಜೀಪು ತೆಗೆಯಲು ಯತ್ನಿಸಿದ್ದಾರೆ. ನಿಧಾನವಾಗಿ ಬರುತ್ತಿದ್ದ ಮಂಗಳಾ ಎಕ್ಸ್ ಪ್ರೆಸ್ ಜೀಪ್ ಗೆ ಡಿಕ್ಕಿಯಾಗಿದೆ. ರಾಮನಗರದಿಂದ ಆಗಷ್ಟೇ ಬಿಟ್ಟಿದ್ದ ರೈಲು ನಿಧಾನಗತಿಯಲ್ಲಿತ್ತು.
 
 
ಈ ವೇಳೆ ಜೀಪ್ ನಲ್ಲಿ ನಲ್ಲಿ ಇಬ್ಬರು ಜೀಪ್ ನಿಂದ ಹೊರಜಿಗಿದು ಅಪಾಯದಿಂದ ಪಾರಾಗಿದ್ದಾರೆ.ಡಿಕ್ಕಿ ಬಳಿಕ ಜೀಪ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಪರಿಣಾಮ ರೈಲು 45 ನಿಮಿಷಗಳ ಕಾಲ ಸ್ಥಳದಲ್ಲೇ ನಿಂತಿತ್ತು. ಜೀಪ್ ತೆರವುಗೊಳಿಸಿದ ಬಳಿಕ ಪ್ರಯಾಣ ಮುಂದುವರಿಸಿದೆ.
ಮಂಗಳಾ ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿತ್ತು. ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here