ತಡವಾಗಿ ಬೆಳಕಿಗೆ ಬಂದ ಪ್ರಕರಣ

0
402

ಹುಬ್ಬಳ್ಳಿ ಪ್ರತಿನಿಧಿ ವರದಿ
ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗುವಿನ ಅಪಹರಣವಾದ ಘಟನೆ ಹುಬ್ಬಳ್ಳಿ ನಗರದ ನೂರಾನಿ ಫ್ಲ್ಯಾಟ್ ನಲ್ಲಿ ನಡೆದಿದೆ. ಮೇ 9ರಂದು ನಡೆದಿದ್ದ ಅಪಹರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
 
 
18 ತಿಂಗಳ ಗಂಡು ಮಗು ಆಫ್ತಾಬ್ ನಜೀರ್ ಅಪಹರಣಕ್ಕೊಳಗಾದ ಮಗುವಾಗಿದೆ. ಮೇ 9ರಂದು ಸಂಜೆ 4 ಗಂಟೆ ಸುಮಾರಿಗೆ ನಜೀರ್ ಸಾಬ್-ಸಲ್ಮಾ ದಂಪತಿ ಪುತ್ರ ಕಿಡ್ನ್ಯಾಪ್ ಆಗಿದ್ದಾನೆ.
 
 
ತಾಯಿ ಸಲ್ಮಾ ಬಾನು ಮಗುವಿಗೆ ಊಟ ಮಾಡಿಸುತ್ತಿದ್ದು, ಮನೆ ಮುಂದೆ ಬಿಟ್ಟು ಒಳಗೆ ಹೋಗಿಬರುವಷ್ಟರಲ್ಲಿ ಮಗು ಕಾಣೆಯಾಗಿದೆ. ನಂತರ ಮಗುವಿಗಾಗಿ ಪೋಷಕರು ಹುಡುಕಾಟ ನಡೆಸುತ್ತಿದ್ದರು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here