ಡ್ರೋನ್ ಕ್ಯಾಮರ್ ನಿಷೇಧಕ್ಕೆ ಚಿಂತನೆ

0
173

 
ಬೆಂಗಳೂರು ಪ್ರತಿನಿಧಿ ವರದಿ
ಕರ್ನಾಟಕದಲ್ಲಿ ಡ್ರೋಣ್ ಕ್ಯಾಮರಾ ನಿಷೇಧಿಸುವಂತೆ ಮನವಿ ಸಲ್ಲಿಸಲಾಗಿದೆ. ಕ್ಯಾಮರಾ ನಿಷೇಧದ ಬಗ್ಗೆ  ಸಿಎಂ ಸಿದ್ದರಾಮಯ್ಯ ಅವರಿಗೆ ಡಿಜಿ&ಐಜಿಪಿ ಓಂ ಪ್ರಕಾಶ್ ಮನವಿ ಸಲ್ಲಿಸಿದ್ದಾರೆ.
 
 
ಅಲ್ಲದೆ ಡಿಜಿ&ಐಜಿಪಿ ಡ್ರೋನ್ ನಿಷೇಧಿಲು ಕಾರಣಗಳನ್ನೂ ನೀಡಿದ್ದಾರೆ. ಡ್ರೋನ್ ಬಳಕೆಯಿಂದ ಅನಾಹುತ, ಅಪಾಯ ಹೆಚ್ಚು. ಅಲ್ಲದೆ ಡ್ರೋನ್ ಬಳಕೆಯಿಂದ ಭದ್ರತೆಗೆ ಧಕ್ಕೆಯ ಸಾಧ್ಯತೆ ಇದೆ. ಅದ್ದರಿಂದ ಡ್ರೋನ್ ನಿಷೇಧಿಸಿ ಎಂದು ಮನವಿ ಸಲ್ಲಿಸಿದ್ದೇನೆ ಎಂದು ಕಾರಣ ವಿವರಿಸಿದ್ದಾರೆ.
 
 
 
ವರದಿ ಸಲ್ಲಿಸಿ: ಸಿಎಂ
ಡ್ರೋನ್ ಬಳಕೆ ಅನಾಹುತಗಳ ಬಗ್ಗೆ ವರದಿ ಸಲ್ಲಿಸಿ ಎಂದು ಸಿಎಂ ಅವರು ಡಿಜಿ&ಐಜಿಪಿ ಓಂ ಪ್ರಕಾಶ್ ಗೆ ಸೂಚಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಡ್ರೋನ್ ನಿಷೇಧಕ್ಕೆ ಚಿಂತನೆ ನಡೆಸಲಾಗುವುದು. ಜಾತ್ರೆ, ಸಮಾರಂಭ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ಡ್ರೋನ್ ಬಳಕೆಯಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಡ್ರೋನ್ ಕ್ಯಾಮರಾ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

LEAVE A REPLY

Please enter your comment!
Please enter your name here