ಡ್ರೈವಿಂಗ್, ಲರ್ನಿಂಗ್ ಲೈಸೆನ್ಸ್ ನ ಶುಲ್ಕದಲ್ಲಿ ಏರಿಕೆ

0
530

ರಾಷ್ಟ್ರೀಯ ಪ್ರತಿನಿಧಿ ವರದಿ
ಡ್ರೈವಿಂಗ್, ಲರ್ನಿಂಗ್ ಲೈಸೆನ್ಸ್ ನ ಶುಲ್ಕದಲ್ಲಿ ಭಾರೀ ಏರಿಕೆಯಾಗಿದೆ. ಇಂದಿನಿಂದ ಡ್ರೈವಿಂಗ್ ಲೈಸೆನ್ಸ್ ಶುಲ್ಕ 6 ಪಟ್ಟು ಏರಿಕೆಯಾಗಿದೆ. ಜೊತೆಗೆ ಎಲ್ ಎಲ್ ಆರ್, ಡಿಎಲ್ ಸೇರಿದಂತೆ ವಾಹನಗಳ ನೋಂದಣಿ ಶುಲ್ಕದಲ್ಲೂ ಏರಿಕೆಯಾಗಿದೆ.
 
 
 
ಕೇಂದ್ರ ಹೆದ್ದಾರಿ ಭೂ ಸಾರಿಗೆ ಸಚಿವಾಲಯದಿಂದ ದರ ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಪರಿಷ್ಕೃತ ದರ ಪಟ್ಟಿ ಬಿಡುಗಡೆಯಾಗಿದೆ.ಡಿಸೆಂಬರ್ 29ರಂದೇ ಎಲ್ಲಾ ರಾಜ್ಯಗಳಿಗೂ ದರ ಪರಿಷ್ಕರಣೆ ವಿವರಣೆ ನೀಡಲಾಗಿದೆ. ನಿನ್ನೆಯಿಂದಲೇ ಪರಿಷ್ಕೃತ ಹೊಸ ದರ ಅನ್ವಯವಾಗಿದೆ.
 
 
ಡಿ.ಎಲ್ ಪರೀಕ್ಷಾ ಶುಲ್ಕ 300ರೂ., ಸ್ಮಾರ್ಟ್ ಕಾರ್ಡ್ 200ರೂ, ಹೆಚ್ಚಳವಾಗಿದೆ. ಡಿಎಲ್ ನವೀಕರಣ ಶುಲ್ಕ 200, ಅಂತಾರಾಷ್ಟ್ರೀಯ ಡಿಎಲ್ ಶುಲ್ಕ 1000ರೂ. ಇದೆ. ಎಲ್ ಎಲ್ ಆರ್ ಪಡೆಯಲು 150., ಪರೀಕ್ಷಾ ಶುಲ್ಕ 50ರೂ. ಆಗಿದೆ.
 
 
35ರೂ. ಇದ್ದ ಡ್ರೈವಿಂಗ್ ಲೈಸೆನ್ಸ್ ಶುಲ್ಕ 200ರೂ.ಗೆ ಏರಿಕೆಯಾಗಿದೆ. ಡಿಎಲ್ ಗೆ ಹೆಚ್ಚುವರಿ ವಾಹನ ಸೇರ್ಪಡೆ ಶುಲ್ಕ 500ರೂ, ಆಗಿದೆ. ದ್ವಿಚಕ್ತ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ನೋಂದಣಿ ಶುಲ್ಕ 4 ಪಟ್ಟು ಏರಿಕೆಯಾಗಿದೆ.

LEAVE A REPLY

Please enter your comment!
Please enter your name here