ಡ್ರಿಂಕ್ಸ್ ಪಾರ್ಟಿ: ಹಲವರು ಉದ್ಯಮಿಗಳು ವಶ

0
411

ರಾಷ್ಟ್ರೀಯ ಪ್ರತಿನಿಧಿ ವರದಿ
ಗುಜರಾತ್ ನ ವಡೋದರಾದಲ್ಲಿ ಡ್ರಿಂಕ್ಸ್ ಪಾರ್ಟಿ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಡ್ರಿಂಕ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಉದ್ಯಮಿಗಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಭಾಗಿಯಾದ 250 ವಿವಿಐಪಿಗಳು, ಉದ್ಯಮಿಗಳನ್ನು ವಶಕ್ಕೆ ಪಡೆಯಲಾಗಿದೆ.
 
 
 
ಗುಜರಾತ್ ನಲ್ಲಿ ಮದ್ಯಪಾನ ನಿಷೇಧವಿದ್ದರೂ ಡ್ರಿಂಕ್ಸ್ ಪಾರ್ಟಿ ಮಾಡಲಾಗಿದೆ. ಬಂಧನವಾದ ಉದ್ಯಮಿಗಳು ಫಾರ್ಮ್ ಹೌಸ್ ನಲ್ಲಿ ಮದುವೆ ಪಾರ್ಟಿ ಮಾಡುತ್ತಿದ್ದರು. ಅಲ್ಲದೆ ಬಿಎಂಡಬ್ಲ್ಯು, ಮರ್ಸಿಡೀಸ್ ಸೇರಿ ಹಲವು ವಾಹನಗಳನ್ನು ಜಪ್ತಿ ಮಾಡಲಾಗಿದೆ.
 
 
 
ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟಿದ ಗುಜರಾತ್ ನಲ್ಲಿ 1960ರಿಂದಲೂ ಮದ್ಯಪಾನ ನಿಷೇಧ ಮಾಡಲಾಗಿದ್ದು, ಅದರ ಹೊರತಾಗಿಯೂ ಮದ್ಯಪಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಐಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here