ಡೋಪ್ ಟೆಸ್ಟ್ ನಲ್ಲಿ ಫೈಲ್

0
379

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಡೋಪ್ ಟೆಸ್ಟ್ ಪಾಸಾಗುವಲ್ಲಿ ಭಾರತೀಯ ಒಲಿಂಪಿಕ್ ತಂಡದ ಸದಸ್ಯ ಇಂದ್ರಜಿತ್ ಸಿಂಗ್ ವಿಫಲವಾಗಿದ್ದಾರೆ. ಇದರಿಂದ ಶಾರ್ಟ್ ಪುಟ್ ಆಟಗಾರ ಇಂದ್ರಜಿತ್ ಸಿಂಗ್ ಗೆ ಭಾರಿ ಆಫಾತವಾಗಿದೆ.
 
 
ರೆಸ್ಲರ್ ನರಸಿಂಗ್ ಯಾದವ್ನಾಡಾ, ನರಸಿಂಗ್ ಯಾದವ್ ಬಳಿಕ ಶಾರ್ಟ್ ಪುಟ್ಟರ್ ಕ್ರೀಡಾಪಟು ಇಂದರ್ ಜೀತ್ ಕೂಡ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಇಂದ್ರಜಿತ್ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕಾಗಿತ್ತು.
 
 
ಕಳೆದ ಜೂನ್ 22ರಂದು ಇಂದರ್ ಜೀತ್ ಅವರಿಂದ ಸಂಗ್ರಹಿಸಿದ್ದ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಇಂದರ್ ಜೀತ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರ ಬಿ ಸ್ಯಾಂಪಲ್ ರಕ್ತದ ಮಾದರಿ ಕೂಡ ಪಾಸಿಟಿವ್ ಎಂದು ತಿಳಿದುಬಂದಿದ್ದು, ನರಸಿಂಗ್ ಯಾದವ್ ರಂತೆ ಅವರನ್ನು ಕೂಡ ಒಲಿಂಪಿಕ್ಸ್ ಸಂಸ್ಥೆ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here