ಡೊನಾಲ್ಡ್ ತೆಕ್ಕೆಗೆ ಅಮೆರಿಕಾದ ಅಧ್ಯಕ್ಷ ಸ್ಥಾನ

0
352

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದಾರೆ. ಟ್ರಂಪ್ ಅವರು 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
 
ಸಾರ್ವತ್ರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಸಾಧಿಸಿದ್ದಾರೆ. ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಜಯಭೇರಿ ಸಾಧಿಸಿದ್ದಾರೆ.
 
 
ಡೊನಾಲ್ಡ್ ಅಮೆರಿಕಾದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಗೆ ಫೋನ್ ಮಾಡಿ ಶುಭಾಶಯ ತಿಳಿಸಿದ್ದಾರೆ.
 
 
ಜಯಭೇರಿ ಸಾಧಿಸಿದ ಡೊನಾಲ್ಡ್ ಮಾತು
ಹಿಲರಿ ಕ್ಲಿಂಟನ್ ಅತ್ಯುತ್ತಮವಾಗಿ ಸ್ಪರ್ಧಿಸಿದ್ದಾರೆ. ಹಿಲರಿ ನನಗೆ ತುಂಬಾ ಕಠಿಣಾ ಸವಾಲು ನೀಡಿದ್ದಾರೆ. ಕೊನೆಗೆ ಅಮೆರಿಕ ಜನರು ನನ್ನ ಸೇವೆ ಬೇಕು ಎಂದಿದ್ದಾರೆ. ಅಮೆರಿಕದ ಜನರಿಗೆ ನಾನು ಎಂದೆಂದಿಗೂ ಸಹ ಅಭಾರಿಯಾಗಿದ್ದೇನೆ ಯಾರು ಅಮೆರಿಕವನ್ನು ಪ್ರೀತಿಸುತ್ತಾರೋ ಇದು ಅವರ ಜಯವಾಗಿದೆ. ಅಮೆರಿಕವನ್ನು ಪುನರ್ ನಿರ್ಮಾಣ ಮಾಡೋಣ. ಅಮೆರಿಕ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕದ ನ್ಯೂಯರ್ಕ್ ನಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here