ಡೇಂಜರ್ `ಬೆದ್ರ’…

0
2900

ಮೂಡುಬಿದಿರೆ: ಯೆಸ್…ಇದು ಡೇಂಜರ್ ಡೇಂಜರ್…ಡೇಂಜರ್…ಈಗಲಾದರೂ ಎಚ್ಚೆತ್ತುಕೊಳ್ಳದಿದ್ರೆ ಇಡೀ ಮೂಡುಬಿದಿರೆ ಜನತೆ ಕೊರೊನಾದಿಂದ ನರಕ ಯಾತನೆ ಅನುಭವಿಸುವ ದಿನ ದೂರವಿಲ್ಲ. ದಿನೇ ದಿನೇ ಮೂಡುಬಿದಿರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು ಹೊಸ 43 ಪ್ರಕರಣಗಳು ದಾಖಲಾಗಿದ್ದು, ಪ್ರದೀದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಠಿಸಿದೆ. ಈ ಪೈಕಿ ಮೂವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 40ಮಂದಿ ಮನೆಯಲ್ಲಿಯೇ ಔಷಧೋಪಚಾರ ಪಡೆದುಕೊಳ್ಳುತ್ತಿದ್ದಾರೆ.
ಮೂಡುಬಿದಿರೆ ಜನತೆಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ. ಅವಶ್ಯ ವಸ್ತು ಖರೀದಿಗೆಂದು ಅವಕಾಶ ಮಾಡಿದಾಗ ಜನಜಾತ್ರೆಯೇ ಪ್ರತೀ ದಿನ ಕಂಡು ಬರುತ್ತಿರುವುದು ದುರಂತದ ಸಂಗತಿ.

LEAVE A REPLY

Please enter your comment!
Please enter your name here