ಡೇಂಜರ್‌ ಬೆದ್ರ!!! ಮತ್ತೆರಡು ಪಾಸಿಟಿವ್!!

0
1694

ಮೂಡುಬಿದಿರೆ ವ್ಯಾಪ್ತಿಯ ಕೇಮಾರು ಹಾಗೂ ಪಾಲಡ್ಕದಲ್ಲಿ ಎರಡು ಹೊಸ ಪ್ರಕರಣಗಳು ದಾಖಲಾಗಿವೆ. ಇವರೀರ್ವರೂ ಮುಂಬೈ ಮೂಲದಿಂದ ಬಂದು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ೧೪ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ಬಂದಿದ್ದರು. ಮನೆಗೆ ಬಂದು ೯ ದಿನದ ನಂತರ ಇವರ ಪ್ರಕರಣಗಳು ʻಪಾಸಟಿವ್‌ʼ ಎಂದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಇವರೀರ್ವರನ್ನು ಶನಿವಾರ ರಾತ್ರಿ ಮಂಗಳೂರಿನ ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.


ರಿಪೋರ್ಟ್‌ ಬಂದಿರಲಿಲ್ಲ: ಇವರೀರ್ವರದ್ದೂ ಗಂಟಲು ದ್ರವ ಮಾದರಿಯ ವರದಿ ಬಂದಿರಲಿಲ್ಲ. ಹಾಗಾಗಿ ಕ್ವಾರಂಟೈನ್‌ ಅವಧಿ ಮುಗಿಸಿ ಬಂದ ನಂತರವೂ ಮನೆಯಿಂದ ಹೊರ ಬರಬಾರದೆಂದು ಖಡಕ್‌ ಸೂಚನೆ ನೀಡಿದ್ದೆವು ಎಂದು ಪಾಲಡ್ಕ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ “‌ವಾರ್ತೆ.ಕಾಂ ” ತಿಳಿಸಿದ್ದಾರೆ. ಇವರ ಪೈಕಿ ಒಬ್ಬರು ಗೋವಾದಿಂದ ಬಂದಿದ್ದರು, ಮತ್ತೊಬ್ಬರು ಮುಂಬೈನಿಂದ ಬಂದಿದ್ದರು.


ಪ್ರತ್ಯೇಕ ಮನೆ: ಪಾಲಡ್ಕ ಸಲ್ಲಗುರಿ ನಿವಾಸಿಯೋರ್ವರು ಕೊರೊನಾ ಹಿನ್ನಲೆಯಲ್ಲಿ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ಬಂದಿದ್ದರಾದರೂ ಅವರಿಗೆ ಪ್ರತ್ಯೇಕ ರೂಮ್‌ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇವರ ಮನೆಯಲ್ಲಿ ಐದು ಮಂದಿ ಇದ್ದರು. ಇದೀಗ ಕೊರೊನಾ ಪಾಸಿಟಿವ್ ಹಿನ್ನಲೆಯಲ್ಲಿ‌ ಇವರೆಲ್ಲರನ್ನು ಕ್ವಾರಂಟೈನ್‌ ಗೆ ಅಳವಡಿಸುವ ಅನಿವಾರ್ಯತೆ ಬಂದೊದಗಿದೆ. ಮತ್ತೊಬ್ಬರು ಕೇಮಾರು ನಿವಾಸಿಯಾಗಿದ್ದು ಇವರು ಪ್ರತ್ಯೇಕ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here